“ಹೊನ್ನಾವರ ಬಸ್ ನಿಲ್ದಾಣ ನಿರ್ಮಾಣದಲ್ಲಿ ನನಗಿಂತಲೂ ಹೆಚ್ಚು ಮಹತ್ತರ ಪಾತ್ರ ಶಾಸಕ ದಿನಕರ ಶೆಟ್ಟಿ ಅವರದ್ದು” ಎನ್ನುವ ಮೂಲಕ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಅವರು ಬಿಜೆಪಿ ರಾಜಕೀಯ ವಲಯದ ಸಾಮರಸ್ಯತೆಯನ್ನು ಹೆಚ್ಚಿಸಿದ್ದಾರೆ.
ಹೊನ್ನಾವರ ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಅವರು ಆಗಮಿಸಿದ್ದ ಸಂದರ್ಭ, ವೇದಿಕೆ ಕಾರ್ಯಕ್ರಮದಲ್ಲಿ ಸಚಿವರೆದುರು ಪ್ರಾಮಾಣಿಕವಾಗಿ ಹಾಡಿ ಹೊಗಳಿದ ಅವರು, ದಿನಕರ ಶೆಟ್ಟಿ ನಮ್ಮಂತೆಯೇ ಜನಪರ ಚಿಂತನೆ ಹೊಂದಿದವರು. ಆದರೆ, ಅಭಿವೃದ್ಧಿ ಕಾರ್ಯಗಳನ್ನು ತುರುಸಿನಿಂದ ಮಾಡಿಸುವಲ್ಲಿ ನಮಗಿಂತಲೂ ಎರಡು ಪಟ್ಟು ಮುಂದಿದ್ದಾರೆ. ಅಂದುಕೊಂಡ ಕೆಲಸವನ್ನು ಮುಗಿಸುವತನಕ ನಿಟ್ಟುಸಿರು ಬಿಡುವ ಜಾಯಮಾನ ಅವರದ್ದಲ್ಲ. ನಮ್ಮ ಬಿಜೆಪಿಯ ಶಾಸಕರು ಎನ್ನಲು ಬಹಳಷ್ಟು ಹೆಮ್ಮೆಯಿದೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

RELATED ARTICLES  ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಕಾರ್ಯಕ್ರಮ


ಶಾಸಕ ದಿನಕರ ಶೆಟ್ಟಿ ತಮ್ಮ ಎರಡನೇ ಅವಧಿಯಲ್ಲಿ ಸಾಕಷ್ಟು ಸವಾಲುಗಳ ನಡುವೆಯೂ ಕ್ಷೇತ್ರದ ಅಭಿವೃದ್ಧಿ ಹಿನ್ನಡೆ ಕಾಣಲು ಅವಕಾಶ ನೀಡಿರಲಿಲ್ಲ. ಸದನದಲ್ಲಿ ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದ ಅವರು, ಅಗತ್ಯ ಅನುದಾನಗಳನ್ನು ತಮ್ಮ ಕ್ಷೇತ್ರಕ್ಕೆ ತರಲು ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿ ಅದರಲ್ಲಿ ಯಶಸ್ವಿಯೂ ಆಗಿದ್ದರು. ಜೊತೆಗೆ ಬಹುತೇಕ ಎಲ್ಲಾ ಸಚಿವರ ಜೊತೆಗೆ ತಮ್ಮ ಕಾರ್ಯ ಚಟುವಟಿಕೆ, ಕ್ರಿಯಾಶೀಲತೆ ಮೂಲಕವೇ ಬಾಂಧವ್ಯ, ವಿಶ್ವಾಸವನ್ನು ವೃದ್ಧಿಸಿಕೊಂಡಿದ್ದಾರೆ.

RELATED ARTICLES  ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಚಿತ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ ಜುಲೈ 13 ಕ್ಕೆ.