ಕೆ.ಪಿ.ಎಸ್.ಸಿ. ನೇಮಕಾತಿಯಲ್ಲಿ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರು ಭ್ರಷ್ಟಾಚಾರ ಎಸಗಿರುವುದು ಆಕ್ಷೇಪಾರ್ಹ ಎಂದು ಶಾಸಕ ದಿನಕರ ಶೆಟ್ಟಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
ಖಾಸಗಿ ಮಾಧ್ಯಮವೊಂದಕ್ಕೆ ಕುಟುಂಬಸ್ಥರು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸದ ಡಿ.ಕೆ.ಸುರೇಶ್ ಅವರು 25 ಲಕ್ಷ ರು. ಲಂಚ ಪಡೆದಿರುವುದು ಪಾಲಕರ ನೇರಾನೇರ ಆರೋಪದ ಮೂಲಕ ಸಾಬೀತಾಗಿದೆ. ಇಂತಹ ಕಡು ಭ್ರಷ್ಟಾಚಾರವನ್ನು ನಾವು ಖಂಡಿಸುತ್ತೇನೆ. ಸಂಸದರು ರಾಜೀನಾಮೆ ನೀಡುವುದು ಒಳಿತು ಎಂದು ಸೂಚಿಸಿದರು.
ಬಿಜೆಪಿ ವಿರುದ್ಧ ಸದಾ ವಾಗ್ದಾಳಿ ನಡೆಸುವ ಡಿಕೆಶಿ ಅವರು ತಮ್ಮ ಬುಡದಲ್ಲೇ ಇರುವ ಕೆಸರನ್ನು ಸ್ವಚ್ಛ ಮಾಡಿಕೊಳ್ಳುವುದು ಸೂಕ್ತ. ಬುಡವನ್ನು ಗಟ್ಟಿ ಮಾಡಿಕೊಂಡು ಇನ್ನೊಬ್ಬರ ಕಡೆ ಬೊಟ್ಟು ಮಾಡಲಿ ಎಂದು ಕಿವಿಮಾತು ಹೇಳಿದರು.

RELATED ARTICLES  ಕೊವಿಡ್ ಪರೀಕ್ಷೆ ನಿರಾಕರಿಸಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ.