ಅಂಕೋಲಾ: ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಖೋಟಾ ನೋಟು ಚಲಾವಣೆ ಜಾಲ ಭೇದಿಸಿ,4 ಆರೋಪಗಳನ್ನು ಬಂಧಿಸಲಾಗಿದ್ದು, 500/- ರೂ ಮುಖಬೆಲೆಯ 26 ಖೋಟಾ ನೋಟುಗಳು ಹಾಗೂ 500 ರೂ. ಮುಖಬೆಲೆಯ 40 ಅಸಲಿ ನೋಟುಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಸ್ಕೂಟಿ ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಪೊಲೀಸ್ ಕಚೇರಿಯ ಸಿ.ಡಿ.ಆರ್ ವಿಭಾಗದ ತಂಡದವರು ಸೇರಿ ಅಸಲಿ ನೋಟಿಗೆ ಖೋಟಾ ನೋಟು ಬದಲಾವಣೆ ಮಾಡಿಕೊಡುತ್ತಿರುವ ಸಂದರ್ಭದಲ್ಲಿ ದಾಳಿ ನಡೆಸಿ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರವಾರ ಕೋಡಿಭಾಗದ ನಿವಾಸಿ ಹೊಟೇಲ್ ಕಾರ್ಮಿಕ ಪ್ರವೀಣ ರಾಜನ್ ನಾಯರ್ ಗೋವಾ ಮಡಗಾವ ನಿವಾಸಿ ಲೋಯ್ಡ ಲಾರೆನ್ಸ್ ಸ್ಟೀವಿಸ್ ಗೋವಾ ಪತ್ರೋಡಾ ನಿವಾಸಿ ಲಾರ್ಸನ್ ಲೂಯಿಸ್ ಸಿಲ್ವ ಗೋವಾ ಮಡಗಾವ ನಿವಾಸಿ ಪ್ರನೋಯ ಫರ್ನಾಂಡಿಸ್ ಬಂಧಿತ ಆರೋಪಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಕಾರವಾರದ ಕೋಡಿಭಾಗದ ನಿವಾಸಿ ಚಾಲಕ ವೃತ್ತಿಯ ಮುಸ್ತಾಕ ಹಸನ್ ಬೇಗ್ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದು ಆತನ ಶೋಧ ಕಾರ್ಯ ಮುಂದುವರಿದಿದೆ. ಕಾರವಾರದ ಭದ್ರಾ ಹೊಟೇಲ್ ಎದುರು ನೋಟುಗಳ ವಿನಿಮಯ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಅಂಕೋಲಾ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠೆಡಾ ಸುಮನ್ ಪನ್ನೇಕರ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ಸಿಬ್ಬಂದಿಗಳಾದ ಭಗವಾನ ಗಾಂವಕರ, ಮಂಜುನಾಥ ಲಕ್ಮಾಪುರ, ಸಂತೋಷಕುಮಾರ, ಪ್ರೇಮಾನಂದ ನಾಯ್ಕ, ಕೆ.ಶ್ರೀಕಾಂತ, ಆಸೀಫ್. ಆರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.