ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಜನಪ್ರಿಯ ಹಾಸ್ಯ ನಟ ಮೋಜನ್ ಜುನೇಜಾ ಅವರು ಇಂದು ಅಗಲಿದಾರೆ. ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೋಹನ್ ಅವರು ಶನಿವಾರ ಬೆಳಗ್ಗೆ 6.15ಕ್ಕೆ ನಿಧನರಾಗಿದ್ದಾರೆ. ಅವರ ಕಿರಿಯ ಪುತ್ರ ಅಕ್ಷಯ್ ಖಾಸಗಿ ವೆಬ್ ಸೈಟ್‌ಗೆ ಮಾಹಿತಿ ನೀಡಿದ್ದಾರೆ. ಮೋಹನ್ ಅವರಿಗೆ ಕರುಳಿನ ತೊಂದರೆ ಅಗಿದ್ದು ಚಿಕ್ಕಬಾಣಾವರದ ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಆರೋಗ್ಯದ ಪರಿಸ್ಥಿತಿ ಅಂತಿಮ ಹಂತ ತಲುಪಿದ ಕಾರಣ ವೈದ್ಯರು ಕೈಮೀರಿದೆ ಎಂದು ಹೇಳಿದ್ದರಂತೆ.
ಶ್ರೀಯುತ ಮೋಹನ್ ಜುನೇಜಾ ಅವರ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ರಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವಾಗಿದ್ದು ಸಿನಿ ರಸಿಕರ ಗಮನ ಸೆಳೆದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿದ್ದರು. ಹೆಣ್ಣು ಮಕ್ಕಳಿಗೆ ತಾಳಿ ಮಹತ್ವ ಸಾರಿದ್ದರು.
ಚೆಲ್ಲಾಟ ಸಿನಿಮಾದಲ್ಲಿ ಮೋಹನ್ ಮಧುಮಗ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿ ರಸಿಕರ ಗಮನ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಮುಟ್ಟಿತ್ತು. ಪ್ರತಿಯೊಂದು ಸಿನಿಮಾದಲ್ಲಿ ಮೋಹನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರತಿಯೊಂದು ಪಾತ್ರವೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿತ್ತು.
ಎಂಬತ್ತು ದಶಕಗಳ ಕಾಲ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಹಾಸ್ಯ ನಟನಾಗಿ ತೆರೆ ಮೇಲಿನ ಜರ್ನಿ ಆರಂಭಿಸಿದ್ದರು. ಮೋಹನ್ ಅವರ ಮೊದಲ ಸಿನಿಮಾ ‘ವಾಲ್ ಪೋಸ್ಟರ್’ ಮತ್ತು ಅವರ ಮೊದಲ ಧಾರಾವಾಹಿ ‘ವಠಾರ’. ಅವರ ಮೊದಲ ಸಿನಿಮಾ ಮೂರ್ನಾಲ್ಕು ಪ್ರಶಸ್ತಿ ಪಡೆದುಕೊಂಡಿದೆ. ಸುಮಾರು 500 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಸಿನಿಮಾ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಬ್ಜ ಸಿನಿಮಾದಲ್ಲೂ ಸಿನಿಮಾ. ಮೋಹನ್ ಅವರು ಪತ್ನಿ ಕುಸುಮಾ ಮತ್ತು ಇಬ್ಬರು ಮಕ್ಕಳಾದ ಅಕ್ಷಯ್ ಮತ್ತು ಅಶ್ವಿನ್ ಅವರನ್ನು ಅಗಲಿದ್ದಾರೆ.