ಭಟ್ಕಳ : ಕಳೆದ 2021, ಏಪ್ರಿಲ್ 8ರಂದು ಶಾಲೆಗೆ ಹೊರಟ ವಿದ್ಯಾರ್ಥಿಯನ್ನು ಮಾರ್ಗ ಮಧ್ಯೆ ವ್ಯಕ್ತಿಯೋರ್ವ ಅಪಹರಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ರು.1ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆಗೊಳಗಾದ ಯುವಕನನ್ನು ತಾಲೂಕಿನ ಶಿರಾಲಿ ಚಿತ್ರಾಪುರ ಬಡಕುಳಿ ನಿವಾಸಿ ಅಕ್ಷಯ ತಂದೆ ಮಂಜುನಾಥ ನಾಯ್ಕ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ನೆಲಮಂಗಲದಲ್ಲಿರುವ ಗ್ರೀನ್ ಚಿಲ್ಲಿ ಡಾಬಾದಲ್ಲಿ ಸೆಕ್ಯೂರಿಟಿ ಗಾರ್ಡ ಆಗಿ ಕೆಲಸ ಮಾಡಿಕೊಂಡಿದ್ದ. ಈತ ತಾಲೂಕಿನ ಹುರುಳಿಸಾಲನಲ್ಲಿ ಇರುವ ತನ್ನ ಅಜ್ಜಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದು, ಸಂತ್ರಸ್ಥ ಬಾಲಕಿಯ ಮೇಲೆ ಕಣ್ಣು ಹಾಕಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES  ಕಾರವಾರದ ಬಾಡದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧತೆ.

ಕಳೆದ 2021, ಏ 8ರಂದು ಶಾಲೆಗೆ ಹೊರಟ ಸಂತ್ರಸ್ಥ ಬಾಲಕಿಯು ಹುರುಳಿಸಾಲ ನಾಗರಮನೆ ಕ್ಲಾಸ್‌ನಲ್ಲಿ ನಿಂತುಕೊಂಡಿದ್ದು, ಆಕೆಯನ್ನು ಆಟೋ ರಿಕ್ಷಾಕ್ಕೆ ಹತ್ತಿಸಿಕೊಂಡ ಆರೋಪಿಯು ಬಾಲಕಿಯನ್ನು ಬಲವಂತವಾಗಿ ಮದುವೆಯಾಗುವುದಾಗಿ ಬೆದರಿಸಿ, ಮಸಲಾಯಿಸಿಕೊಂಡು ಬೆಂಗಳೂರಿಗೆ ಪಲಾಯನಗೈದಿದ್ದ, ನಂತರ ಆಕೆಯನ್ನು ಬೆಂಗಳೂರಿನ ನೆಲಮಂಗಲದಲ್ಲಿ ಇರುವ ಗ್ರೀನ್ ಚಿಲ್ಲಿ ಡಾಬಾದ ಪಕ್ಕದ ರೂಮಿಗೆ ಕರೆದೊಯ್ದು ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಅವಳನ್ನು ಹೆದರಿಸಿ ಅವಳಿಗೆ ಅರಿಶಿನ ಕೊಂಬು ಮತ್ತು ಕರಿಮಣಿ ತಾಳಿ ಕಟ್ಟಿ, ಹೂವಿನ ಹಾರ ಹಾಕಿ ಅಪ್ರಾಪ್ತೆಯನ್ನು ಮದುವೆಯಾದ ಬಗ್ಗೆ ಪೋಟೋ ಕಳುಹಿಸಿಕೊಟ್ಟಿದ್ದ.

ಸಿಪಿಐ ದಿವಾಕರ ನೇತೃತ್ವದಲ್ಲಿ ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋ ವಿರುದ್ಧ ಐಪಿಸಿ ಕಲಂ 363, 376, 506 ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ತಡೆ (ಷೋಸ್ಕೋ ಆ್ಯಕ್ಟ್-2012) ಕಲಂ 4, 6, ಬಾಲ್ಯವಿವಾಹ ನಿಷೇಧ ಕಾಯ್ದೆ 2006 ಕಲಂ 9 ಕಾಯ್ದೆಯಡಿ ಭಟ್ಕಳ ಗ್ರಾಮೀಣ ಠಾಣೆಯ  ಭರತ್ ಪ್ರಕರಣ ದಾಖಲಿಸಿಕೊಂಡಿದ್ದರು. ಸಿಪಿಐ ದಿವಾಕರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಪಟ್ಟಿ ಸಲ್ಲಿಸಿದ್ದರು.

RELATED ARTICLES  ಪರೇಶ್ ಮೇಸ್ತ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ

ವಿಚಾರಣೆಯನ್ನು ಕೈಗೆತ್ತಿಕೊಂಡ ಹೆಚ್ಚುವರಿ
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸದರಿ ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಜೈಲು ಶಿಕ್ಷೆ ಹಾಗೂ1 ಲಕ್ಷ ರುಪಾಯಿ ದಂಡ ವಿಧಿಸಿ ತೀರ್ಪು
ನೀಡಿದೆ.