ಕುಮಟಾ: ಪಟ್ಟಣದ ರಸ್ತೆಗಳ ಅಗಲೀಕರಣ ವಿಚಾರವು ದ್ವಂದ್ವ ನಿಲುವುಗಳಿಂದ ವಿಳಂಬವಾಗಿದ್ದು ಅಂಗಡಿಕಾರರ ವಿರೋಧದ ಕಾರಣ ಕೆಲವೆಡೆ ಮಾತ್ರ ಸಫಲವಾಗಿದೆ. ಆದಾಗ್ಯೂ ಶಾಸಕ ದಿನಕರ ಶೆಟ್ಟಿ ಅವರು ಅಂಗಡಿಕಾರರನ್ನು ವಿಶ್ವಾಸಕ್ಕೆ ಪಡೆದುಕೊಂಡು ರಸ್ತೆ ಅಗಲೀಕರಣ ಕಾರ್ಯಕ್ಕೆ ಸ್ಪಷ್ಟ ರೂಪ ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ಶಾಸಕರ ಪ್ರಯತ್ನದಿಂದ ಹಳೆ ಬಸ್ ನಿಲ್ದಾಣದಿಂದ ಬಸ್ತಿಪೇಟೆವರೆಗೆ ರಸ್ತೆ ಅಗಲೀಕರಣಗೊಂಡಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ ಲಾಕ್ ಅಳವಡಿಕೆ ಮಾಡುವ ಮೂಲಕ ಈ ಪ್ರದೇಶಗಳು ಅಚ್ಚುಕಟ್ಟಾದ ವ್ಯವಸ್ಥೆಗೆ ಒಳಪಟ್ಟಿತ್ತು. ಆದರೆ, ಸುಭಾಸ್ ರಸ್ತೆ, ಮಾರುಕಟ್ಟೆ ರಸ್ತೆಗಳನ್ನು ಅಗಲಪಡಿಸಲು ವಿರೋಧ ವ್ಯಕ್ತವಾಗಿತ್ತು. ಆದರೆ, ದಿನಕರ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿಕಾರರ ಜೊತೆಗೆ ಚರ್ಚೆ ನಡೆಸಿದ್ದಾರೆ.

RELATED ARTICLES  ಹಿಂದುಗಳ ಸಹನೆ ದೌರ್ಬಲ್ಯವಲ್ಲ ಅದು ಶಕ್ತಿ : ಶ್ರೀಕಲಾ‌ ಶಾಸ್ತ್ರಿ


ಪಟ್ಟಣವನ್ನು ಮಾದರಿಯನ್ನಾಗಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಿದ್ದು, ಅಗಲೀಕರಣ ಕಾಮಗಾರಿ ನಡೆಯದಿದ್ದರೆ ಇದು ಸಾಧ್ಯವಾಗುವುದಿಲ್ಲ. ಈಚೆಗಿನ ವರ್ಷಗಳಲ್ಲಿ ಜನಸಂಖ್ಯೆ ಜೊತೆಗೆ ವಾಹನ ದಟ್ಟಣೆಯೂ ಹೆಚ್ಚಾಗಿದ್ದು ಪ್ರತಿದಿನ ಈ ಭಾಗದಲ್ಲಿ ಸಂಚಾರ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಪ್ರಯಾಣಿಕರು ಕೂಡ ರೋಸಿ ಹೋಗುತ್ತಿದ್ದಾರೆ. ರಸ್ತೆ ಅಗಲಗೊಳ್ಳುವುದು ಅನಿವಾರ್ಯವಾಗಿದ್ದು ಕುಮಟಾ ಪಟ್ಟಣದ ಅಭಿವೃದ್ಧಿಗೆ ನಮ್ಮೊಂದಿಗೆ ಕೈಜೋಡಿಸಿ ಎಂದು ಹೇಳಿದರು. ಇದಕ್ಕೆ ಅಂಗಡಿಕಾರರು ಕೂಡ ಸಮ್ಮತಿ ಸೂಚಿಸಿದ್ದು, ಶೀಘ್ರವೇ ಈ ಕಾಮಗಾರಿಗೆ ಚಾಲನೆ ದೊರೆಯುವ ಸೂಚನೆ ಲಭಿಸಿದೆ. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ದಿಲೀಪ ನಾಯ್ಕ, ಇಂಜಿನಿಯರ್ ಹೇಮಚಂದ್ರ, ಹೆಸ್ಕಾಂ ಇಂಜಿನಿಯರ್ ರಾಜೇಶ ಮಡಿವಾಳ ಇದ್ದರು.

RELATED ARTICLES  ದಾಂಡೇಲಿ ಸಿಂಗಾಪುರ ಮಾಡುತ್ತೇನೆ ಎಂದ ಸಚಿವರು ಮಾತು ಮರೆತಿದ್ದಾರೆ : ಸುನೀಲ್ ಹೆಗಡೆ