ಅಂಕೋಲಾ: ಮೇ 6 ರಂದು ಬೆಳಿಗ್ಗೆ 10-15 ರ ಸುಮಾರಿಗೆ ಮೊಬೈಲ್ ಸಿಮ್ ಕಾರ್ಡ್ ಖರೀದಿಸಲು ಅಂಕೋಲಾಕ್ಕೆ  ಹೋಗುವುದಾಗಿ ಹೇಳಿ ಮನೆಯಿಂದ ಹೋಗಿರುವ ವ್ಯಕ್ತಿಯೊಬ್ಬ  ಮನೆಗೆ ಮರಳಿ ಬಾರದೇ ಈತ ಎಲ್ಲಿಯೋ ಕಾಣೆ ಆಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ.

RELATED ARTICLES  ಹೊನ್ನಾವರ ಮಾರ್ಕೆಟಿಂಗ್ ಸೊಸೈಟಿ ಚುನಾವಣೆ : ಶಿವಾನಂದ ಹೆಗಡೆ ಕಡತೋಕಾ ಬೆಂಬಲಿತ ತಂಡಕ್ಕೆ ಜಯ

47 ವಯೋಮಾನದ ಸುಂಕಸಾಳ ಸಬಗುಳಿ ನಿವಾಸಿ ಸಚಿನ ಸುರೇಶ ನಾಯ್ಕ  ಕಾಣೆಯಾದ ವ್ಯಕ್ತಿಯಾಗಿದ್ದು, ಈ ಕುರಿತು ಬೆಂಗಳೂರು ನಂದಿನಿ ಲೇ ಔಟ್ ನಲ್ಲಿ ವಾಸಿಸುತ್ತಿರುವ ಆತನ ಪತ್ನಿ ಶಿಲ್ಪಾ ಸಚಿವ ನಾಯ್ಕ ಎನ್ನುವವರು ದೂರು ನೀಡಿದ್ದಾರೆ ಎನ್ನಲಾಗಿದೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

RELATED ARTICLES  ಹೊನ್ನಾವರ ಸಮೀಪ ಭೀಕರ ಅಪಘಾತ: ಓರ್ವನ ದುರ್ಮರಣ.