ಕುಮಟಾ: ಅಜಾತಶತ್ರುವಾಗಿದ್ದ ರೋಹಿದಾಸ ನಾಯ್ಕ ಅವರ ಸವಿನೆನಪಿಗಾಗಿ ಖೇಲ್ ಕಬಡ್ಡಿ ಕ್ರೀಡಾಕೂಟ ಆಯೋಜಿಸಿರುವುದು ಸಂತಸದ ವಿಚಾರವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ದಿ.ರೋಹಿದಾದ ನಾಯ್ಕ ಅವರ ಸ್ಮರಣಾರ್ಥ ಟೀಮ್ ವಾರಿಯರ್ಸ್ ನವರು ಭಾನುವಾರ ರಾತ್ರಿ ಹಮ್ಮಿಕೊಂಡ ಪ್ರಥಮ ವರ್ಷದ ರಾಜ್ಯಮಟ್ಟದ ಖೇಲ್ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಕೊರೋನಾ ಸಂದರ್ಭದಲ್ಲಿ ಟೀಂ ವಾರಿಯರ್ಸ್ ತಂಡದ ಸದಸ್ಯರ ಕಾರ್ಯ ಶ್ಲಾಘನೀಯವಾಗಿದೆ. ಸಾಮಾಜಿಕ ಕಾರ್ಯಗಳ ಜೊತೆ ಮಾನವೀಯ ಕಾರ್ಯಗಳಲ್ಲೂ ಭಾಗಿಯಾಗಿರುವುದು ಇತರೆ ಯುವಕರಿಗೂ ಮಾದರಿ ಸಂಗತಿಯಾಗಿದೆ ಎಂದರು.

RELATED ARTICLES  ಮತ ಚಲಾಯಿಸಲು ತವರೂರಿಗೆ ಹೋಗುವುದಾಗಿ ತಿಳಿಸಿದ ಕುಮಟಾದ ಮಹಿಳೆ ನಾಪತ್ತೆ


ಕುಮಟಾದಲ್ಲಿಯೇ ವಿವಿಧ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲು ಮ್ಯಾಟ್ ವ್ಯವಸ್ಥೆ ಮಾಡಿಸುವ ಪ್ರಯತ್ನ ನನ್ನದಾಗಿದ್ದು, ಸಚಿವರು ಹಾಗೂ ಮುಖ್ಯಮಂತ್ರಿಗಳ ಬಳಿ ಒತ್ತಡ ಹೇರುತ್ತೇನೆ ಎಂದು ಭರವಸೆ ನೀಡಿದರು.
ಸೂರಜ್ ನಾಯ್ಕ ಸೋನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ರವಿ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡ ರವಿಕುಮಾರ್ ಶೆಟ್ಟಿ, ಶ್ರೀನಿವಾಸ ನಾಯಕ, ಸಾಮಾಜಿಕ ಕಾರ್ಯಕರ್ತ ಅಭಿಷೇಕ ನಾಯಕ, ವಿಶಾಲ್ ಅಣ್ವೇಕರ್, ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕಮಲಾಕರ ನಾಯಕ ಇದ್ದರು.

RELATED ARTICLES  ಪ್ರತಿಭಾವಂತ ವಿದ್ಯಾರ್ಥಿಯನ್ನು ಸನ್ಮಾನಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಕಡತೊಕಾ