ಸಿದ್ದಾಪುರ : ತಾಲೂಕಿನ ನಿಡಗೋಡು ಮಧ್ಯಭಾಗದ ಪ್ರದೇಶವೊಂದರಲ್ಲಿ ಸಿದ್ದಾಪುರ ಕಡೆಯಿಂದ ಶಿರಸಿ ಕಡೆಗೆ ತೆರಳುತ್ತಿದ್ದ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ವಾಹನ  ಪಲ್ಟಿಯಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ವಾಹನದ ಬಿಡಿಭಾಗಗಳಿಗೆ ಹಾನಿಯಾಗಿದೆ. ಆಂಬುಲೆನ್ಸ್ ನಲ್ಲಿ ಚಾಲಕನೊಬ್ಬನೇ ಪ್ರಯಾಣಿಸುತ್ತಿರುವಾಗ ಘಟನೆ ನಡೆದಿರುವುದರಿಂದ  ಅದೃಷ್ಟವಶಾತ್ ದೊಡ್ಡಮಟ್ಟದ ಹಾನಿ ಸಂಭವಿಸಿಲ್ಲ. ಅದಲ್ಲದೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

RELATED ARTICLES  ಹೊನ್ನಾವರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಣಗಳ ಲಾರಿ ಪೋಲೀಸ್ ಬಲೆಗೆ