ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ಏಕಸದಸ್ಯ ಪೀಠ ಬಿಎಸ್‌ವೈ ವಿರುದ್ಧ ಎಸಿಬಿ ದಾಖಲಿಸಿದ್ದ ಎರಡು ಎಫ್‌ಐಆರ್‌ಗೆ ತಡೆ ನೀಡಿದೆ.
ಶಿವರಾಮಕಾರಂತ ಬಡಾವಣೆ ಡಿನೋಟಿಫೈ ವಿಚಾರಕ್ಕೆ ಸಂಬಂಧಿಸಿದಂತೆ ACB ಎಫ್‌ಐಆರ್ ದಾಖಲಿಸಿತ್ತು. ಎಸಿಬಿ ದಾಖಲಿಸಿದ್ದ FIR ರದ್ದು ಕೋರಿ BSY ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದ ಮಧ್ಯಂತರ ಆದೇಶ ಕುರಿತು ಹೈಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು ದೀರ್ಘಕಾಲದ ಡಿಕ್ಟೇಷನ್ ನೀಡಿ, ಪ್ರಕರಣದ ಸಮಗ್ರ ವ್ಯಾಖ್ಯಾನ ಮಾಡುತ್ತಾ ಈ ತೀರ್ಪು ನೀಡಿದ್ದಾರೆ.
ಶಿವರಾಮಕಾರಂತ ಬಡಾವಣೆಯನ್ನು ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಲಾಗಿದೆ ಎಂದು ಆರೋಪಿಸಿದ್ದ ACB ಯಡಿಯೂರಪ್ಪ ವಿರುದ್ಧ 2 ಎಫ್ಐಆರ್ ದಾಖಲಿಸಿತ್ತು.