ಭಟ್ಕಳ: ತಾಲೂಕಿನ ಮೂಡಭಟ್ಕಳ ಬೈಪಾಸ್ ಬಳಿನಡೆದ ಭೀಕರ ಅಪಘಾತವೊಂದರಲ್ಲಿ ಸ್ಕೂಟಿ ಸವಾರ ಸಾವನ್ನಪ್ಪಿತದ ಘಟನೆ ನಡೆದಿದೆ. ಗ್ಯಾಸ್ ಟ್ಯಾಂಕರ್ ಮತ್ತು ಸ್ಕೂಟಿ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಬೈಂದೂರು ತಾಲ್ಲೂಕಿನ ಶಿರೂರ ಅಡುವಿನ ಕೋಣೆ ನಿವಾಸಿ ಇಕ್ಬಾಲ್ ಮುಲ್ಲಾ  ಎಂದು ತಿಳಿದು ಬಂದಿದೆ.

RELATED ARTICLES  ಕರಾಟೆ ಶಿಬಿರಕ್ಕೆ ಚಾಲನೆ

ಮಂಗಳೂರು ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ  ಗ್ಯಾಸ್ ಟ್ಯಾಂಕರ್ ಲಾರಿ ಚಾಲಕ, ಅದೇ ಮಾರ್ಗದಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಹಿಂಬದಿಯಿoದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತಿ ವೇಗ ಮತ್ತು ಅಜಾಗರುಕತೆಯಿಂದ ಈ ಘಟನೆ ನಡೆದಿದೆ‌ ಎನ್ನಲಾಗಿದೆ.

RELATED ARTICLES  ಸಮರ್ಥ ಆಡಳಿತ ನೀಡಿದ ಮೋದಿಯವರ ಆಡಳಿತದ ಬಗ್ಗೆ ಜನರಿಗೆ ತಿಳಿಸಲು ನಾಳೆ ಕುಮಟಾದಲ್ಲಿ ಬೈಕ್ ರ್ಯಾಲಿ.