ಕುಮಟಾ: ಪಟ್ಟಣದ ಹೊಸ ಬಸ್ ನಿಲ್ದಾಣಕ್ಕೆ ಶನಿವಾರ ದಿಢೀರ್ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಸ್ವಚ್ಛತೆಯ ದುರವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದರು. ನಿಲ್ದಾಣದ ಒಳಗಡೆ ಮತ್ತು ಆವಾರದಲ್ಲಿ ಎಲ್ಲೆಡೆ ಕಸ, ಪ್ಲಾಸ್ಟಿಕ್ ಗಳು ಬಿದ್ದುಕೊಂಡಿರುವುದನ್ನು ಗಮನಿಸಿದ ಅವರು ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಶೌಚಾಲಯ ಮತ್ತು ಸ್ವಚ್ಛತೆ ನಿರ್ವಹಣೆಯನ್ನು ಗುತ್ತಿಗೆ ಪಡೆದು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಪ್ರಶ್ನಿಸಿದ ಅವರು, ಸುಮಾರು ಒಂದು ಗಂಟೆಗಳ ಕಾಲ ನಿಲ್ದಾಣದಲ್ಲೆ ಖುದ್ದಾಗಿ ನಿಂತು ಸ್ವಚ್ಛ ಮಾಡಿಸಿದರು.

ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ದ್ವಿಚಕ್ರ ವಾಹನಗಳ ನಿಲುಗಡೆ ಕೂಡ ಅಸ್ತವ್ಯಸ್ತಗೊಂಡಿದ್ದು, ಬೇಕಾಬಿಟ್ಟಿ ಪಾರ್ಕಿಂಗ್ ಮಾಡತೊಡಗಿದ್ದಾರೆ. ಕೆಲವರು ನಿಲ್ದಾಣದ ಮುಖ್ಯದ್ವಾರದ ಎದುರಲ್ಲೇ ನಿಲ್ಲಿಸಿ ಹೋಗುತ್ತಿದ್ದು ಅಂತಹ ವಾಹನಗಳನ್ನು ಲಾಕ್ ಮಾಡಿ ಠಾಣೆಗೆ ಒಯ್ಯಲು ಪೊಲೀಸ್ ಇಲಾಖೆಗೆ ತಿಳಿಸುತ್ತೇನೆ ಎಂದರು. ಜೊತೆಗೆ ಕುಮಟಾ ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ವಿವಿಧ ಜಿಲ್ಲೆಗಳ ಜನರು ಇಲ್ಲಿಗೆ ಬರುತ್ತಾರೆ. ಹಾಗಾಗಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿ ಅವಶ್ಯವಾಗಿದ್ದು ಸಾರಿಗೆ ಘಟಕದ ಜಿಲ್ಲಾಧಿಕಾರಿ ಹಾಗೂ ಡಿಪೋ ವ್ಯವಸ್ಥಾಪಕರು ಮುತುವರ್ಜಿ ವಹಿಸಬೇಕು ಎಂದರು.

RELATED ARTICLES  ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ, ದೊರೆಯುತ್ತದೆ: ನಾಗರಾಜ ನಾಯಕ ತೊರ್ಕೆ