ಕಾರವಾರ : ಗಡಿನಾಡ ಕನ್ನಡ ಉತ್ಸವದಲ್ಲಿ “ಗಡಿಭಾಗದ ಭಾಷಾವೈವಿಧ್ಯತೆ ಮತ್ತು ಸೌಹಾರ್ದತೆ” ವಿಷಯವಾಗಿ ಉತ್ತರ ಕನ್ನಡ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಕೋಡಕಣಿಯ ಅರವಿಂದ ಶ್ಯಾನಭಾಗ, ಬಾಳೇರಿಯವರು ಪ್ರಥಮ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ರೂ. 10000/- ಬಹುಮಾನದ ಮೊತ್ತವನ್ನು ಅಭಿನಂದನಾ ಪತ್ರದೊಂದಿಗೆ ಸಂಘದ ಅಧ್ಯಕ್ಷರಾದ ಷಡಕ್ಷರಿಯವರು ಪ್ರದಾನ ಮಾಡಿ ಗೌರವಿಸಿದರು.