ಹೊನ್ನಾವರ: ತಾಲೂಕಿನ ಚಿಕ್ಕನಾಕೋಡ ಗುಂಡಿಗದ್ದೆಯ ಶೇಖರ್ ನಾಯ್ಕ್ ಎಂಬುವವರ ತೋಟದಲ್ಲಿ ತೆಂಗಿನಕಾಯಿ ಕೊಯ್ಯುವ ಸಂದರ್ಭದಲ್ಲಿ ಮರದಿಂದ ಬಿದ್ದು ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ನಡೆದಿದೆ. ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದ ತಿಪ್ಪಯ್ಯ ನಾಯ್ಕ್ ಎಂಬುವವನೇ ಮೃತ ವ್ಯಕ್ತಿಯಾಗಿದ್ದು, ಅಸ್ವಸ್ಥಗೊಂಡ ಈತನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.