ಕುಮಟಾ: ದೈವಜ್ಞ ಬ್ರಾಹ್ಮಣ ಸಮಾಜ ಒಗ್ಗಟ್ಟಿಗೆ ಹೆಸರಾಗಿದ್ದು ಎಲ್ಲರನ್ನ  ಸುಶಿಕ್ಷಿತರನ್ನಾಗಿ ಮಾಡಬೇಕು ಎಂಬ ಧ್ಯೇಯ, ಸಂಕಲ್ಪ ತೊಟ್ಟು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.  ಪಟ್ಟಣದ ಹೊಸ ಹೆರವಟ್ಟಾದಲ್ಲಿ ದೈವಜ್ಞ ಗೆಳೆಯರ ಬಳಗ ಭಾನುವಾರ ಹಮ್ಮಿಕೊಂಡ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಮೋದಿ ಸರ್ಕಾರ ವಿವಿಧ ಯೋಜನೆಗಳನ್ನು ನೀಡಿದ್ದು ಮಕ್ಕಳನ್ನು ಸಾಧನೆಯೆಡೆ ಪ್ರೋತ್ಸಾಹಿಸುವುದರಲ್ಲಿ ಪಾಲಕರ ಪಾತ್ರವೂ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸುಲಭವಲ್ಲ. ಆಸಕ್ತಿ, ಛಲದಿಂದ ಪರಿಶ್ರಮ ಪಡುವ ಮನೋಭಾವ ಮೂಡಬೇಕು  ಎಂದು ಕಿವಿಮಾತು ಹೇಳಿದರು.

RELATED ARTICLES  ಆತ್ಮಹತ್ಯೆಗೆ ಶರಣಾದ ವ್ಯಕ್ತಿ : ಕುಟುಂಬದ ಆಕೃಂದನ.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಸಾಯಿಕಿರಣ್ ಶೇಟ್, ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಪ್ರಶಾಂತಿ ರಾಯ್ಕರ್ ಪ್ರಾರ್ಥಿಸಿದರು. ರಾಜೇಶ್ ಶೇಟ್ ಕಾರ್ಯಕ್ರಮ ನಿರೂಪಿಸಿದರು.  ಸುವರ್ಣಕಾರರ ಕೋ ಆಪರೇಟಿವ್  ಸಹಕಾರಿ ಸಂಘದ ಅಧ್ಯಕ್ಷ ಮಧುಸೂದನ್ ಶೇಟ್ , ಮಾಜಿ ಶಾಸಕ ಗಂಗಾಧರ ಭಟ್ಟ, ಮಂಜುನಾಥ ಜನ್ನು, ರಾಜಕುಮಾರ್ ಶೇಟ್, ಡಾ.ವಿನಾಯಕ ರಾಯ್ಕರ್, ಸಂಜಯ್ ರಾಯ್ಕರ್, ಭರತ್ ಶೆಟ್, ಶರತ್ ಶೇಟ್, ರಾಜೇಶ್ ಶೇಟ್, ಕುಮಾರ್ ಶೇಟ್, ಶ್ರೀಧರ್ ಶೇಟ್, ದಾಸ ಗಣಪತಿ ಶೇಟ್, ಸುರೇಶ್ ಶೇಟ್, ನಾಗೇಶ್ ನಾಯ್ಕ, ಮಹಾಬಲೇಶ್ವರ ಶೇಟ್, ಸದಾನಂದ ಶೇಟ್, ಸುಬ್ರಹ್ಮಣ್ಯ ರಾಯ್ಕರ್, ಪರಮೇಶ್ವರ್ ಶೇಟ್, ಸುಬ್ರಹ್ಮಣ್ಯ ಶೇಟ್, ವಂದನಾ ದಿವಾಕರ್ ಇದ್ದರು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ "ಶಾಲೆಗಾಗಿ ನಾವು-ನೀವು" ಕಾರ್ಯಕ್ರಮ