ಕುಮಟಾ : ತಾಲೂಕಿನ ಸ.ಹಿ.ಪ್ರಾ ಶಾಲೆ ಹೊಲನಗದ್ದೆಯಲ್ಲಿ ಶಾಲಾ ಪ್ರಾರಂಭೋತ್ಸವ ಅಧಿಕಾರಿಗಳು ಹಾಗೂ ಊರ ನಾಗರೀಕರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಸಂಪನ್ನವಾಯಿತು. ಡಿ.ಡಿ.ಪಿ.ಐ ಮಾನ್ಯ ಶ್ರೀ ಹರೀಶ ಗಾಂವಕರ, ಉಪನಿರ್ದೇಶಕರು (ಅಭಿವೃದ್ಧಿ) ಮಾನ್ಯ ಶ್ರೀ ಈಶ್ವರ ನಾಯ್ಕ. ಉಪನಿರ್ದೇಶಕರ ಕಚೇರಿ.ಕಾರವಾರ ಇದರ ಶ್ರೀ ಶ್ರೀಕಾಂತ ಹೆಗಡೆ. ಕುಮಟಾದ ಬಿ.ಇ.ಓ ಮಾನ್ಯ ಶ್ರೀ ರಾಜೇಂದ್ರ ಭಟ್ಟ ಹಾಗೂ ಸಮನ್ವಯಾಧಿಕಾರಿಗಳಾದ ಶ್ರೀಮತಿ ರೇಖಾ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇಂಗ್ಲೀಷ್ ಮೀಡಿಯಂ ತರಗತಿಯ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ವಿಶೇಷವಾಗಿ ಎಲ್ಲಾ ಮಕ್ಕಳಿಗೂ ಪೆನ್ ನೀಡಿ ಸ್ವಾಗತಿಸಲಾಯಿತು. ಸಿಹಿಯೂಟ ನೀಡಲಾಯಿತು. ಇಲಾಖಾ ಅಧಿಕಾರಿಗಳು ಮಕ್ಕಳ ಜೊತೆ ಊಟ ಮಾಡಿದರು. ಶಾಲೆಯ ಸ್ವಚ್ಛತೆ, ಮೂಲಭೂತ ಸೌಕರ್ಯಗಳ ಲಭ್ಯತೆ, ದಾನಿಗಳ ಸಹಕಾರದಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘಿಸಿದರು. ಎಸ್.ಡಿ.ಎಮ್.ಸಿ.ಅಧ್ಯಕ್ಷರು, ಸದಸ್ಯರು, ನಾಮನಿರ್ದೇಶಿತ, ಪದನಿಮಿತ್ತ ಸದಸ್ಯರು ಶಿಕ್ಷಕರು ಸಹಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ರವೀಂದ್ರ ಭಟ್ಟ ಸೂರಿ, ಹಾಗೂ ಇತರ ಶಿಕ್ಷಕರು ಇದ್ದರು.