ಹೊನ್ನಾವರ : ಮಳೆಗಾಲ ಬಂತೆಂದರೆ ಸಾಕು ವಿದ್ಯುತ್ ಸಮಸ್ಯೆಯಿಂದ ಜನರು ಬಳಲುವುದು ಸಾಮಾನ್ಯ, ಆದರೆ ಇಂತಹ ಸಮಸ್ಯೆ ತಪ್ಪಿಸಲು ಜನತೆ ಪ್ರತ್ಯೇಕ ವಿದ್ಯುತ್ ಸಂಪರ್ಕಕ್ಕಾಗಿ ಅಧಿಕಾರಿಗಳನ್ನು ವಿನಂತಿಸಿ ಮನವಿ ಸಲ್ಲಿಸಿದ ಬಗ್ಗೆ ವರದಿಯಾಗಿದೆ. ಹಳದೀಪುರ ಗ್ರಾಮದ ಮಜರೆಗಳಾದ ಸಂಕೊಳ್ಳಿ, ಕುದಬೈಲ್, ಚಂಡೇಶ್ವರ, ಜೋಗಣಿಕಟ್ಟೆ  ಮುಂತಾದ ಭಾಗಗಳಿಗೆ ಹೊನ್ನಾವರದಿಂದ ಕರ್ಕಿ ಹಾಗೂ ದುಗ್ಗೂರಿನ ಮೂಲಕ ವಿದ್ಯುತ್ ತಂತಿಗಳನ್ನು ಎಳೆದು ವಿದ್ಯುತ್ ಪೂರೈಸಲಾಗುತ್ತಿದ್ದು,  ಇಷ್ಟು ದೂರ ವಿದ್ಯುತ್ ಪೂರೈಸುವ ಸಂದರ್ಭದಲ್ಲಿ ಮಳೆಗಾಲ ಹಾಗೂ ಇತರ ಅಭಿವೃದ್ಧಿ ಮತ್ತು ದುರಸ್ತಿ ಕಾರಣಗಳಿಂದ ವಿದ್ಯುತ್ ನಿಲುಗಡೆ ನಿರಂತರವಾಗಿ ಜನರಿಗೆ ತಲೆನೋವಾಗಿ ಪರಿಣಮಿಸಿದೆ. ವಿದ್ಯತ್ ಸರಬರಾಜು ಇಲ್ಲದೆ ಜನತೆ ಅನೇಕ ದಿನಗಳ ಕಾಲ ಕಳೆಯುವಂತಾಗುತ್ತಿದೆ. ಹೀಗಾಗಿ ಈ ತೊಂದರೆ ತಪ್ಪಿಸಲು ಮರಾಕಲ್ ಭಾಗದಿಂದ ಹೆಮ್ಮಕ್ಕಿ ವರೆಗೆ ಬಂದಿರುವ ತಂತಿಗಳಿಗೆ 100ಮೀಟರ್ ಹೊಸ ಸಂಪರ್ಕ ಒದಗಿಸಿ ವಿದ್ಯುತ್ ಪೂರೈಕೆ ಮಾಡುವುದರಿಂದ ಜನತೆಯ ಈ ತೊಂದರೆ ತಪ್ಪಿಸಬಹುದು ಎಂದು ಜನತೆ ಅಧಿಕಾರಿಗಳಿಗೆ ಮನವಿಯ ಮೂಲಕ ವಿನಂತಿಸಿದೆ.

RELATED ARTICLES  ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ :ಪ್ರಮೋದ ಹೆಗಡೆ

ನಿರಂತರವಾಗಿ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯ ತಪ್ಪಿಸಿ ಜನತೆಗೆ ಅನುಕೂಲವಾಗುವಂತೆ ಕೇವಲ 100 ಮೀಟರ್ ವಿದ್ಯುತ್ ತಂತಿಗಳಿಂದ ಈ ಸಮಸ್ಯೆ ನಿವಾರಣೆ ಮಾಡಬಹುದಾಗಿದ್ದು. ಈ ಬಗ್ಗೆ ಅಧಿಕಾರಿಗಳು ತುರ್ತು ಕ್ರಮಕೈಗೊಳ್ಳುವಂತೆ ಜನರು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಜಿತ್ ನಾಯ್ಕ, ಪ್ರಮುಖರಾದ ಶಿವಾನಂದ ನಾಯ್ಕ, ಜನಾರ್ಧನ ನಾಯ್ಕ, ಶ್ಯಾಮಲಾ ನಾಯ್ಕ, ವಿವೇಕ ನಾಯ್ಕ, ಉಮೇಶ ನಾಯ್ಕ, ರಾಮಚಂದ್ರ ಶೇಟ್ ಹಾಗೂ ಇತರರು ಇದ್ದರು.

RELATED ARTICLES  ಪರಿವರ್ತನಾ ಯಾತ್ರೆಯ ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ ನಾಗರಾಜ ನಾಯಕ ತೊರ್ಕೆ .