ಗೋಕರ್ಣ : ಉತ್ತರಕನ್ನಡಕ್ಕೆ ಪ್ರವಾಸಕ್ಕೆ ಬರುವವರು ಸಮುದ್ರದ ಸುಳಿಗೆ ಸಿಕ್ಕು ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಅಂತಹುದೇ ಒಂದು ಘಟನೆ ಮತ್ತೆ ನಡೆದಿದ್ದು ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ಕರಿಯಪ್ಪನ ಕಟ್ಟೆಯ ಬಳಿ ಸಮುದ್ರದಲ್ಲಿ ಈಜುವಾಗ ಸುಳಿಗೆ ಸಿಕ್ಕು ಮೃತಪಟ್ಟ ಘಟನೆ ಇದಾಗಿದೆ.

RELATED ARTICLES  ಗ್ರಾಮ ಸಮರ : ಭಟ್ಕಳ, ಹೊನ್ನಾವರ, ಕುಮಟಾದ ಈ ವರೆಗಿನ ಫಲಿತಾಂಶಗಳು ಇಲ್ಲಿದೆ.

ಖಾಸಗಿ ರೆಸಾರ್ಟ್ ನಲ್ಲಿ ಉಳಿದಿದ್ದ ಛತ್ತೀಸಗಡದ ಮೂಲದ ರಾಹುಲ್ ಪಾಂಡೆ ಗೆಳೆಯರ ಜೊತೆ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದ ಸಮಯದಲ್ಲಿ ಸಮುದ್ರದಲ್ಲಿ ಈಜುವಾಗ ನೀರಿನ ಸುಳಿಗೆ ಸಿಕ್ಕು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಕೊಂಡಿದ್ದಾರೆ.

RELATED ARTICLES  ವಿದ್ಯಾರ್ಥಿ ನೀರುಪಾಲು..!