ಕುಮಟಾ: ರಾಜ್ಯದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಬಿಜೆಪಿ ಸರ್ಕಾರ ರೈತರ ಏಳ್ಗೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂಬುದನ್ನು ನಿರೂಪಿಸಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬಿಜೆಪಿ ಜಿಲ್ಲಾ ರೈತಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಜನತಾ ಪಾರ್ಟಿಯ ತತ್ವ, ಸಿದ್ಧಾಂತಗಳನ್ನು ಸರ್ವವ್ಯಾಪಿಗೊಳಿಸಲು ವಿವಿಧ ಸಂಘಟನೆಗಳನ್ನು ಮಾಡಿದ್ದು ರೈತರಿಗೆ ಅನುಕೂಲ ಕಲ್ಪಿಸುವ ರೈತ ಮೋರ್ಚಾ ಕಲ್ಪನೆ ಕೂಡ ಒಂದಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅಭಿಪ್ರಾಯಪಟ್ಟರು. ಸಮುದಾಯದ ವ್ಯವಸ್ಥೆ ಅಡಿಯಲ್ಲಿ ಫಸಲ್ ಭೀಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ತಂದಿದ್ದು ಬಡ ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ ಖಾತೆಗೆ ಹಣ ಜಮಾ ಮಾಡುವ ಕಾರ್ಯಕ್ರಮವೂ ನಡೆದಿದೆ ಎಂದರು.

RELATED ARTICLES  ಮನುಷ್ಯನ ವ್ಯಕ್ತಿತ್ವಕ್ಕೆ ಸಂಸ್ಕಾರ, ಸಂಸ್ಕೃತಿ ಅಗತ್ಯ: ಕೃಷ್ಣ ಭಟ್ಟ ನಾಯಕನಕೆರೆ

ವಿರೋಧ ಪಕ್ಷದವರು ಮೋದಿಯವರನ್ನು ವಿರೋಧ ಮಾಡುತ್ತಲೇ ದೇಶವನ್ನೇ ವಿರೋಧಿಸುವ ಹಂತಕ್ಕೆ ಬಂದು ತಲುಪಿದ್ದಾರೆ. ಖಲಿಸ್ತಾನ್ ಜೊತೆಗೆ ಕೈಜೋಡಿಸಿರುವುದು ಕೂಡ ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

RELATED ARTICLES  ವಿದ್ಯುತ್ ತಂತಿ ತಗುಲಿ ಯುವಕ ಸಾವು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಹೆಗಡೆ, ಪ್ರಸನ್ನ ಕೆರೆಕೈ, ಗೋವಿಂದ ನಾಯ್ಕ, ಗೋಪಾಲಕೃಷ್ಣ ವೈದ್ಯ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಇದ್ದರು.