ಕುಮಟಾ : ಕುಮಟಾದ ಮೂರೂರು ರೋಡ್ ನಿವಾಸಿಗಳಾದ ರಾಯೇಶ್ವರ ನಾಗೇಶ ಶೆಟ್ಟಿ (52 ವರ್ಷ)ಅವರು ಕಳೆದ ರವಿವಾರ ರಾತ್ರೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ದಿಢೀರಾಗಿ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದುದರಿಂದ ಅವರನ್ನು ಸರಕಾರೀ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಆರಂಭಕ್ಕೂ ಮೊದಲೇ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಸರಳ ಸಜ್ಜನರಾಗಿದ್ದ ರಾಯೇಶ್ವರ ಶೆಟ್ಟಿ ಯವರು ಹಲವು ವರ್ಷಗಳಿಂದ ಕುಮಟಾದ ಭಾರತೀಯ ಕುಟುಂಬ ಯೋಜನಾ ಸಂಘದ ಆಸ್ಪತ್ರೆಯ ವಾಹನ ಚಾಲಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದರು.
ಮೃತರು ಕುಮಟಾದ ಲಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯಲ್ಲಿ ಸೀನಿಯರ್ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪತ್ನಿ ವನಿತಾ ಶೆಟ್ಟಿ ,ಈರ್ವರು ಪುತ್ರರು ಹಾಗೂ ಬಂಧು ಬಳಗ ವನ್ನು ಬಿಟ್ಟಗಲಿದ್ದಾರೆ.
ನಿಧನ ಸುದ್ಧಿ ತಿಳಿದ ಲಯನ್ಸ್ ಕಣ್ಣಿನ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಮೃತರ ಮನೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಅವರ ಆತ್ಮಕ್ಕೆ ಸದ್ಗತಿ ಕೋರಿ ಕುಟುಂಬದವರಿಗೆ ಸಾಂತ್ವನ ಹೇಳಿದರು.