ಭಟ್ಕಳ: ತಾಲೂಕಿನ ಹಾಡುವಳ್ಳಿಯ ಕೆಂದಕಿಕೇರಿ ಕ್ರಾಸ್ ಬಳಿ ಚಲಿಸುತ್ತಿದ್ದ ಬೈಕಿಗೆ ನಾಯಿ ಅಡ್ಡ ಬಂದ ಪರಿಣಾಮ ಬೈಕಿನ ಹಿಂಬದಿಗೆ ಕುಳಿತಿದ್ದ ಮಹಿಳೆ ರಸ್ತೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟ ಘಟನೆ ನಡೆದಿದೆ. ಅಲ್ಲದೆ ಬೈಕ್ ಸವಾರನಿಗೆ ಅಲ್ಪಸ್ವಲ್ಪ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತಾಲೂಕಿನ ಹಾಡುವಳ್ಳಿಯ ಸೀತಾ ಕೃಷ್ಣಾ ನಾಯ್ಕ, ಮೃತಪಟ್ಟ ದುರ್ದೈವಿ.ಆಕೆಯ ಪತಿ ಕೃಷ್ಣಾ ದೇವಪ್ಪ ನಾಯ್ಕ ಗಾಯಗೊಂಡವರಾಗಿದ್ದಾರೆ.

RELATED ARTICLES  ಕುಮಟಾ ರೋಟರಿಯಿಂದ ವ್ಹೀಲ್ ಚೇರ್ ಕೊಡುಗೆ

 

ಬೆಳಿಗ್ಗೆ 10.30ರ ಸುಮಾರಿಗೆ ಇವರು ಹಾಡುವಳ್ಳಿಯಿಂದ ಭಟ್ಕಳಕ್ಕೆ ಬೈಕಿನಲ್ಲಿ ಬರುತ್ತಿದ್ದಾಗ ಎದುರಿಗೆ ನಾಯಿಯೊಂದು ಅಡ್ಡ ಬಂದಿದೆ. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸ್ಕಿಡ್ ಆಗಿದ್ದು ಹಿಂಬದಿಗೆ ಕುಳಿತ ಸೀತಾ ನಾಯ್ಕಳ ತಲೆಯ ಹಿಂಭಾಗ ರಸ್ತೆಗೆ ಬಡಿದು ಗಂಭೀರ ಗಾಯವಾಗಿತ್ತು. ತಕ್ಷಣ ಆಕೆಯನ್ನು ಆರೋಗ್ಯ ರಕ್ಷಾ ಕವಚ ವಾಹನದಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಆಕೆ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ.

RELATED ARTICLES  ಅಂಕೋಲಾ‌ ಸಮೀಪ ಭೀಕರ ಅಪಘಾತ: ಮೂವರು ಸ್ಥಳದಲ್ಲಿಯೇ ಸಾವು

ಬೈಕ ಸವಾರನಾಗಿದ್ದ ಆಕೆಯ ಪತಿ ಕೃಷ್ಣಾ ನಾಯ್ಕನಿಗೂ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಮೃತಳಿಗೆ ಇಬ್ಬರು ಮಕ್ಕಳಿದ್ದಾರೆ. ಈಕೆಯ ಸಾವಿನ ಸುದ್ದಿ ತಿಳಿದ ನೂರಾರು ಜನರು, ಸಂಬಂಧಿಕರು ಸರಕಾರಿ ಆಸ್ಪತ್ರೆಗೆ ಧಾವಿಸಿ ಮೃತದೇಹ ವೀಕ್ಷಿಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಾಡುವಳ್ಳಿಯ ಈಶ್ವರ ಶನಿಯಾ ನಾಯ್ಕ ಎನ್ನುವವರು ದೂರು ನೀಡಿದ್ದು, ಪಿಎಸೈ ಎಂ ವಿ ಚಂದಾವರ ತನಿಖೆ ಕೈಗೊಂಡಿದ್ದಾರೆ.