ಬೆಂಗಳೂರು: 2022 ನೇ ಸಾಲಿನ SSLC ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 85.63% ಫಲಿತಾಂಶ ದಾಖಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು. ಈ ಬಾರಿ ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಹತ್ತು ವರ್ಷದಲ್ಲಿ ಇದು ದಾಖಲೆಯ ಫಲಿತಾಂಶವಾಗಿದೆ. 145 ವಿದ್ಯಾರ್ಥಿಗಳು 600/600 ಅಂಕ ಪಡೆದಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

RELATED ARTICLES  ಭಟ್ಕಳದಲ್ಲಿ ಯಶಸ್ವಿಯಾಗಿ ನಡೆದ ಸರ್ಕಾರಿ ನೌಕರರ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ.

ಉತ್ತರ ಕನ್ನಡದ ವಿದ್ಯಾರ್ಥಿಗಳ ಸಾಧನೆ.

ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿವಿಎಸ್ ಕೆ ಪ್ರೌಢಶಾಲೆಯ ಮೇಘನಾ ಭಟ್, ಕಾರ್ತಿಕ್ ಭಟ್, ದೀಕ್ಷಾ ನಾಯ್ಕ, ಶಿರಸಿ ಸೇಂಟ್ ಅಂಥೋನಿಯ ಶರ್ಮಿನಾ ಶೇಖ್,  ಮಾರಿಕಾಂಬಾ ಸರ್ಕಾರಿ ಪಿಯು ಕಾಲೇಜಿನ ಚಿರಾಗ್ ನಾಯ್ಕ, ಶಿರಸಿಯ ಸೂರ್ಯನಾರಾಯಣ ಹೈಸ್ಕೂಲ್ ನ ಕನ್ನಿಕಾಪರಮೇಶ್ವರಿ ಹೆಗಡೆ, ಸಿದ್ದಾಪುರದ
ಪ್ರಶಾಂತಿ ಹೈಸ್ಕೂಲ್ ಶಿರಸಿಯ ತುಷಾರ್ ಶಾನಭಾಗ 625 ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

RELATED ARTICLES  ಜನವರಿ 23 ಮತ್ತು 24ರಂದು ಜಿಲ್ಲಾಮಟ್ಟದ ಆಹ್ವಾನಿತ ಸಾಮಾಜಿಕ ಸ್ಪರ್ಧಾ ನಾಟಕೋತ್ಸವ