ಕುಮಟಾ : ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇಕಡಾ ನೂರು ಫಲಿತಾಂಶದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಸಹಿತ ಐದು ರ್ಯಾಂಕ್ ಪಡೆದು  ಮಹತ್ವದ ಸಾಧನೆ ತೋರಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ  ಒಟ್ಟೂ 89 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕುಮಾರಿ ದೀಪಿಕಾ ಸಂತೋಷ ಪ್ರಭು 625 ಅಂಕಗಳಿಗೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ rank ನೊಂದಿಗೆ ಉತ್ತಮ ಸಾಧನೆ ತೋರಿರುತ್ತಾಳೆ. ಅಲ್ಲದೇ ಕುಮಾರ ಆದಿತ್ಯ ಎ.ಜಿ.623, ಕುಮಾರ ಶ್ರವಣಕುಮಾರ್ ಎಂ. ಪಾಟೀಲ್ 623, ಕುಮಾರಿ ಡಿ.ಎಸ್.ದೀಕ್ಷಾ 622, ಕುಮಾರಿ ಮೇಘನಾ ಪ್ರಕಾಶ ನಾಯ್ಕ 618 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಕ್ರಮವಾಗಿ ಮೂರು, ನಾಲ್ಕು, ಎಂಟನೇ rank ಪಡೆದಿರುತ್ತಾರೆ.

RELATED ARTICLES  ಕುಮಟಾದ 'ಕಲ್ಯಾಣ ಕ್ಲಿನಿಕ್' ನಲ್ಲಿ ತಜ್ಙ ಯುವ ವೈದ್ಯ ಡಾ.ಭರತ್ ಶೇಟ್ ಇವರ ಸೇವೆ ಆರಂಭ.

ಉಳಿದಂತೆ 35 ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪೆಡದು ಉತ್ತೀರ್ಣರಾದರೆ 31 ವಿದ್ಯಾರ್ಥಿಗಳು ಶೇಕಡಾ 80ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆ ತೋರಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಪಾಲಕರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.

RELATED ARTICLES  ಕರ್ನಲ್ ಹುದ್ದೆಗೆ ಪದೋನ್ನತಿ ಹೊಂದಿದ ಮಂಜುನಾಥ ಹೆಗಡೆ.