ಹೊನ್ನಾವರ : ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೧ ಬಾಲಕರು ೧೯ ಬಾಲಕಿಯರು ಒಟ್ಟು ೪೦ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಿದ್ದರು. ಕುಮಾರಿ ಸುಕೃತಾ ಎಸ್. ಭಟ್ ೬೨೫ ಕ್ಕೆ ೬೨೪ ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿರುವುದು ನಮ್ಮ ಶಾಲೆಯ ಹೆಗ್ಗಳಿಕೆ. ಮತ್ತು ಕುಮಾರಿ ಶೃದ್ಧಾ ಶಂಭು ಭಟ್ಟ ರಾಜ್ಯಕ್ಕೆ ೯ ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿರುತ್ತಾಳೆ. ಮತ್ತು ಉಳಿದ ೩೮ ವಿದ್ಯಾರ್ಥಿಗಳಲ್ಲಿ ೩೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ , ೬ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಶಾಲೆಯು ೧೦೦ ಕ್ಕೆ ೧೦೦ ಗಳಿಸಿರುತ್ತದೆ ಮತ್ತು ‘ಎ’ ಗ್ರೇಡ್ ನ್ನು ಪಡೆದಿರುತ್ತದೆ. ವಿದ್ಯಾರ್ಥಿಗಳನ್ನು ಮತ್ತು ತರಬೇತಿ ಮಾಡಿದ ಶಿಕ್ಷಕರನ್ನು ಶ್ರೀ ಭಾರತಿ ಎಜ್ಯುಕೇಶನ್ ಟ್ರಸ್ಟ ನ ಆಡಳಿತ ಮಂಡಳಿಯವರು ಅಭಿನಂದಿಸಿದರು.

RELATED ARTICLES  ಉತ್ತರಕನ್ನಡಕ್ಕೆ ಭೇಟಿ ನೀಡಲಿರುವ ಮಾಜಿ ಸಿಎಂ ಸಿದ್ದರಾಮಯ್ಯ