ಕುಮಟಾ : ತಾಲೂಕಿನ ಅಘನಾಶಿನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಕಟವಾದ ಎಸ ಎಸ್ ಎಲ್ ಸಿ ಫಲಿತಾಂಶದಲ್ಲಿ ಅದ್ಭುತ ಸಾಧನೆ ದಾಖಲಿಸಿದೆ.ಗ್ರಾಮೀಣ ಪ್ರದೇಶದ ಬಡ ಹಿಂದುಳಿದ ವರ್ಗದವರೇ ಹೆಚ್ಚಿರುವ ಅಘನಾಶಿನಿಯ ಸುತ್ತಮುತ್ತಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು ಪರೀಕ್ಷೆಗೆ ಕುಳಿತ 26 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು 100% ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಕುಳಿತ 26 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಓರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಕುಮಾರಿ ಜಾಹ್ನವಿ ಯು ಪಟಗಾರ 96.32% ಪಡೆದು ಪ್ರಥಮ ಸ್ಥಾನ , ಕುಮಾರಿ ಚೈತನ್ಯಾ ಅಶೋಕ ಗೌಡ 93.92% ದ್ವಿತೀಯ ಸ್ಥಾನ, ಕುಮಾರಿ ಮಾನಸ ಗೋಪಾಲ ಗೌಡ 90.08%ತೃತೀಯ ಸ್ಥಾನ ಗಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಈ ವಿದ್ಯಾರ್ಥಿಗಳ ಸಾಧನೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಶಾಸಕರಾದ ದಿನಕರ ಕೆ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಹರಿಕಾಂತ, ಕಾಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಲ್ ಭಟ್ಟ, ಬಿಆರ್ ಸಿ ಸಂಯೋಜಕರಾದ ರೇಖಾ ನಾಯ್ಕ ಮುಖ್ಯ ಶಿಕ್ಷಕಿ ಮಮತಾ ನಾಯ್ಕ ಹಾಗು ಶಿಕ್ಷಕರು ಎಸ್ ಡಿ ಎಮ್ ಸಿ ಸದಸ್ಯರು ಅಭಿನಂದಿಸಿದ್ದಾರೆ.