ಹೊನ್ನಾವರ: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.) ಇವರು ಕಳೆದ ೩೬ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ, ಗುಣವಂತೆ ೨೦೨೨-೨೩ನೇ ಸಾಲಿನ ಯಕ್ಷಗಾನ ತರಬೇತಿಯ ಪ್ರವೇಶಕ್ಕಾಗಿ ಅರ್ಜಿಯನ್ನು ಅಹ್ವಾನಿಸಿದೆ. ವಿದ್ಯಾರ್ಹತೆ ೫ ನೇ ತರಗತಿ ಅಥವಾ ಕನ್ನಡ ಓದಲು, ಬರೆಯಲು ತಿಳಿದಿರಬೇಕು. ಅನುಭವ, ಆಸಕ್ತಿ, ವಯಸ್ಸು, ಸ್ಪಷ್ಟವಾದ ವಿಳಾಸದೊಂದಿಗೆ ಅರ್ಜಿಪತ್ರವನ್ನು ಕೆಳಗಿನ ವಿಳಾಸಕ್ಕೆ ಕಳಿಸಬೇಕು. ಆಯ್ಕೆಯಾದವರಿಗೆ ಉಚಿತ ಊಟ, ವಸತಿ, ಶಿಕ್ಷಣವನ್ನು ಹಾಗೂ ವಿದ್ಯಾರ್ಥಿವೇತನ ಕೂಡಾ ನೀಡಲಾಗುವುದು.
ಗುರುಕುಲದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಹೊರತಾಗಿ ಅನ್ಯ ಯಕ್ಷಗಾನಾಸಕ್ತರಿಗೆ ಕೂಡ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಮತ್ತು ರಜಾದಿನಗಳಲ್ಲಿ ತರಬೇತಿ ಪಡೆಯಬಹುದು. ಸುತ್ತಮುತ್ತಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೂಡಾ ಯಕ್ಷಗಾನ ಶಿಕ್ಷಣವನ್ನು ನೀಡಲಾಗುವುದು.

ಬರುವ ಜುಲೈ ೧೫ರಿಂದ ಯಕ್ಷಗಾನ ತರಗತಿ ಆರಂಭವಾಗಲಿದೆ. ಆಸಕ್ತರು ಸಂಪರ್ಕಿಸಿ.

ಕೆರೆಮನೆ ಶಿವಾನಂದ ಹೆಗಡೆ
ನಿರ್ದೇಶಕರು,
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.)
ಅಂಚೆ: ಗುಣವಂತೆ, ತಾ: ಹೊನ್ನಾವರ, ಉ. ಕ.-೫೮೧ ೩೪೮
ಮೊ. , ೯೪೪೮೧೮೯೧೪೦ , ೯೪೮೦೫೧೦೩೦೦

RELATED ARTICLES  ಕುಡಿದ ಅಮಲಿನಲ್ಲಿ ವಿಷ ಸೇವಿಸಿ ಪ್ರಾಣಬಿಟ್ಟ ಸಿದ್ದಾಪುರದ ವ್ಯಕ್ತಿ