ಭಟ್ಕಳ : ಸ್ಪಂದನ ಚ್ಯಾರಿಟೇಬಲ್ ಟ್ರಸ್ಟ, ರೋಟರಿ ಕ್ಲಬ್ ಭಟ್ಕಳ,ಹಾಗೂ ಇಂಡಿಯಾ ಫಾರ್ ಐಎಎಸ್ ಬೆಂಗಳೂರು ಸಂಸ್ಥೆಗಳ ಸಹಯೋಗದಲ್ಲಿ ಐಎಎಸ್, ಕೆಎಎಸ್ ಮತ್ತು ವಿವಿಧ ಸ್ಪರ್ದಾತ್ಮಕ ಪರೀಕ್ಷಾ ಸಿದ್ಧತಾ ಕಾರ್ಯಾಗಾರವು ಇದೇ ಬರುವ ೨೨ನೇ ತಾರೀಖಿನ ರವಿವಾರ ಇಲ್ಲಿನ ಕಮಲಾವತಿ ರಾಮನಾಥ ಶ್ಯಾನಬಾಗ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಾಗಾರವು ಮುಂಜಾನೆ ೯.೩೦ಕ್ಕೆ ಆರಂಭವಾಗಲಿದ್ದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಉದ್ಘಾಟಿಸಲಿದ್ದು ಸ್ಪಂದನ ಹಾಗೂ ರೋಟರಿ ಕ್ಲಬ್‌ನ ಅಧ್ಯಕ್ಷ ರಾಘವೇಂದ್ರ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಭಟ್ಕಳ ಎಜುಕೇಶನ್ ಟ್ರಸ್ಟನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮುಖ್ಯ ಅತಿಥಿಯಾಗಿ ಉಪಸ್ಥಿತರಿಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆ ಸಂಬಂಧಿಸಿದಂತೆ ಬೆಂಗಳೂರಿನ ಇಂಡಿಯಾ ಫಾರ್ ಐಎಎಸ್ ಸಂಸ್ಥೆಯ ರಾಷ್ಟçಮಟ್ಟದ ಹೆಸರಾಂತ ತರಬೇತುದಾರರು ಮಾರ್ಗದರ್ಶನ ನೀಡಲಿದ್ದಾರೆ.

RELATED ARTICLES  ಅನ್ವೇಷಣಾ – 2023 ಉದ್ಘಾಟನೆ

ತರಬೇತುದಾರರಾಗಿ ಆಗಮಿಸಲಿರುವ ಪ್ರಶಾಂತ ಎಸ್. ಅವರು ನಾಗರಿಕ ಸೇವಾ ಪರೀಕ್ಷೆಗಳಾದ ಐಎಎಸ್, ಕೆಎಎಸ್ ಪರೀಕ್ಷಾ ಸಿದ್ಧತೆಯ ಕುರಿತು ಮಾರ್ಗದರ್ಶನ ನೀಡಿದರೆ, ಸಯ್ಯದ ಸದತ್ ಅವರು ಐಬಿಪಿಎಸ, ರೇಲ್ವೆ, ಪಿಎಸಐ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಅಮನ್ ಜೈನ್ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ಎದುರಿಸಲು ಮಾನಸಿಕವಾಗಿ ಹೇಗೆ ಸಿದ್ಧರಾಗಬೇಕು ಎಂಬ ಮಹತ್ವಪೂರ್ಣ ವಿಷಯದ ಕುರಿತು ತಿಳಿಸಿಕೊಡಲಿದ್ದಾರೆ೧೦ನೇ ತರಗತಿಯಿಂದ ಪದವಿ ಹಂತದ ವರೆಗಿನ, ಪದವಿ ಮುಗಿಸಿರುವ ಎಲ್ಲರೂ ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕು.

RELATED ARTICLES  ಮಗುವಿನೊಂದಿಗೆ ತೆರಳಿದ್ದ ಮಹಿಳೆ ನಾಪತ್ತೆ : ಪ್ರಕರಣ ದಾಖಲು.

ನಮ್ಮೂರಿನ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಆಕಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯಿರುವುದನ್ನು ಮನಗಂಡು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ೯೬೨೦೧೧೧೬೨೫ ಮತ್ತು ೯೧೪೧೬೨೯೮೬೧ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದೆಂದು ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಕೋರಿದ್ದಾರೆ.