ಶಿರಸಿ; ಫ್ರಾನ್ಸ್ ದೇಶದ ನಾರ್ಮಂಡಿ ಅಲ್ಲಿ ನಡೆದ ISF gymnasiadನ 19ನೇ ಆವೃತ್ತಿಯ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ 70 ದೇಶಗಳ 3500 ಕ್ರೀಡಾಪಟುಗಳು ಭಾಗವಹಿಸಿದ್ದು, ಶಿರಸಿಯ ಲಯನ್ಸ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರೇರಣಾ ನಂದಕುಮಾರ್ ಶೇಟ್ ಬ್ಯಾಡ್ಮಿಂಟನ್ ನಲ್ಲಿ ಬಂಗಾರದ ಪದಕಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾಳೆ. ಸಮಸ್ತ ಭಾರತವೇ ಹೆಮ್ಮೆ ಪಡುವ ಸಾಧನೆ ತೋರಿದ ಕುಮಾರಿ ಪ್ರೇರಣಾಳನ್ನು ತವರು ನೆಲ ಶಿರಸಿಗೆ ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನಿಸುವ ಕಾರ್ಯಕ್ರಮವನ್ನು ಶಿರಸಿ ಲಯನ್ಸ್ ಕ್ಲಬ್ ಹಾಗೂ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆ ಆಯೋಜಿಸಿದೆ.

RELATED ARTICLES  ಶಾರದಾ ಮೋಹನ‌ ಶೆಟ್ಟಿಯವರ ಪರವಾಗಿ ಪ್ರಚಾರ ಪ್ರಾರಂಭ: ಕಾರ್ಯಕರ್ತರ ಪಡೆ ಸಿದ್ಧಗೊಳಿಸಿದ ರವಿಕುಮಾರ ಶೆಟ್ಟಿ.

ಮೇ.23 ಸೋಮವಾರ ಸಂಜೆ 4 ಗಂಟೆಗೆ ನೀಲೇಕಣಿ ವೃತ್ತದಲ್ಲಿ ಕುಮಾರಿ ಪ್ರೇರಣಾ ಶೇಟ್ ಹಾಗೂ ಅವಳ ಪಾಲಕರನ್ನು ಸ್ವಾಗತಿಸುವ ಕಾರ್ಯಕ್ರಮವಿದ್ದು ಅನಂತರ ಶಿರಸಿ ಲಯನ್ಸ್ ಶಾಲೆಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುತ್ತದೆ. ಶಿರಸಿ ಲಯನ್ಸ್ ಸಭಾಂಗಣದಲ್ಲಿ ನಡೆಯುವ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾನ್ಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ ಲಯನ್ಸ್ ಕ್ಲಬ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಶಿರಸಿ ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ಶಿರಸಿಯ ಎಲ್ಲಾ ನಾಗರಿಕ ಸಂಘಟನೆಗಳು, ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

RELATED ARTICLES  ಕುಮಟಾ : ನೀರು ತರಲು ಹೋದಾತ ಬಾವಿಗೆ ಬಿದ್ದು ಸಾವು.