ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮದುವೆ ದಿಬ್ಬಣದ ವಾಹನ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ನಡೆದಿದೆ ಎನ್ನಲಾಗಿದೆ.
ಮದುವೆ ದಿಬ್ಬಣದ ಜನರನ್ನು ಕೊಂಡೊಯ್ಯುತ್ತಿದ್ದ ಮಾರುತಿ ಇಕೊ  ಮತ್ತು ಎದುರುಗಡೆಯಿಂದ ಬರುತ್ತದ್ದ ಕಾರು  ಢಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, 8ಕ್ಕೂ  ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸಿದ್ಧಾಪುರ ತಾಲ್ಲೂಕಿನ  ಶಿರೂರು  ಬಳಿ ನಡೆದಿದೆ ಎಂದು ವರದಿಯಾಗಿದೆ.

RELATED ARTICLES  ಕನ್ನಡ ಸಾಹಿತ್ಯ ಪರಿಷತ್ ನಿಂದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ : ಪ್ರೋತ್ಸಾಹ ಸಿಕ್ಕರೆ ಪ್ರತಿಭಾನ್ವಿತರು ನೈಜತೆ ತೋರುತ್ತಾರೆ : ರಾಜೇಂದ್ರ ಭಟ್ಟ

ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಘಟಕ ಅಧ್ಯಕ್ಷರಾಗಿದ್ದ ಮಂಜುನಾಥ ಬಿ ಗೌಡ ಕಬ್ಬಿನ್ಮನೆ  ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮದುವೆ ಮುಗಿಸಿಕೊಂಡು ದಿಬ್ಬಣದ ಜನರನ್ನು ಇಕೋ ವಾಹನದಲ್ಲಿ ಕರೆದುಕೊಂಡು ತೆರಳುವಾಗ ಎದುರಿನಿಂದ ಬಂದ ಕಾರಿಗೆ ಢಿಕ್ಕಿಯಾಗಿದ ಪರಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಮುದ್ದು ಕಂದಮ್ಮಗಳ ವಿದ್ಯಾಧಾಮ ಬೀರಕೋಡಿ ಅಂಗನವಾಡಿ ಕೇಂದ್ರಕ್ಕೆ ಸ್ಥಳದಾನ ಗೈದ ಪದ್ಮಾವತಿ ಪದ್ಮಯ್ಯ ಜೈನ್ ಮತ್ತು ಶಿವರಾಜ್ ನಾಯ್ಕ ಇವರಿಗೆ ಶಾಸಕ ದಿನಕರ ಶೆಟ್ಟಿಯವರಿಂದ ಸನ್ಮಾನ.