ಕುಮಟಾ : ಗೋಕರ್ಣದ ಸಿದ್ದೇಶ್ವರ ಗಜನಿಯಲ್ಲಿ ಕಲ್ಗಾ ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಮಹಿಳೆಯೋರ್ವಳು ಸಾವನಪ್ಪಿದ ಘಟನೆ ವರದಿಯಾಗಿದೆ. ತೊರೆಗಜ್ಜಿ ಮೂಲದ ದೇವಕಿ ಹರಿಂಕತ್ರ ಮೃತ ಮಹಿಳೆ, ಕುಮಟಾ ತಾಲೂಕಿನ ತೊರೆಗದ್ದೆ ಮೂಲದವಳಾದ ಇವಳು, ನದಿಯಿಂದ ಕಲ್ಗಾವನ್ನು ತೆಗೆದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಳು. ಆದರೆ ರವಿವಾರ ಕಲ್ದಾ ತೆಗೆಯಲು ತೆರಳಿದವಳು ಸಂಜೆಯಾದರೂ ಮನೆಗೆ ಬಾರದೇ ಇರುವುದರಿಂದ ಸ್ಥಳೀಯರು ಹುಡುಕಾಟ ನಡೆಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ. ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಹೊನ್ನಾವರ ನ್ಯೂಇಂಗ್ಲೀಷ್ ಸ್ಕೂಲ್ನಲ್ಲಿ ಶಾಲಾ ವಾರ್ಷಿಕೋತ್ಸವ