ಕುಮಟಾ: ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸುವಲ್ಲಿ ಸಮಾಜದ ಪಾತ್ರ ಹಿರಿದಾದುದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ರೇಖಾ ನಾಯ್ಕ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕುಮಟಾ ಕನ್ನಡ ಸಂಘ ದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳನ್ನು ಗೌರವಿಸಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ಕರೋನಾ ಕಾಯಿಲೆಯಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನಮ್ಮ ವಿಧ್ಯಾರ್ಥಿಗಳು ಉತ್ತಮ ಅಂಕಗಳಿಸಿ ಪ್ರೌಢಿಮೆ ಮೆರೆದಿದ್ದಾರೆ. ಶಿಕ್ಷಕ ವೃಂದದ ಮಾರ್ಗದರ್ಶನ, ಪಾಲಕರ ಹಾಗೂ ಸಮಾಜದ ಸಹಕಾರ ದಿಂದಾಗಿ ಈ ಯಶಸ್ಸು ಸಾಧ್ಯವಾಗಿದೆ. ಉತ್ತಮ ಫಲಿತಾಂಶ ಬರಲು ಕಾರಣೀಕರ್ತರಾದ ಎಲ್ಲರೂ ಅಭಿನಂದನಾರ್ಹರು. ವಿಶೇಷವಾಗಿ ಕಳೆದ ಆರು ತಿಂಗಳ ಹಿಂದೆ ಅಸ್ಥಿತ್ವಕ್ಕೆ ಬಂದ ಕುಮಟಾ ಕನ್ನಡ ಸಂಘ ಭಾಷೆ, ನೆಲ,ಜಲ,ನಾಡು,ನುಡಿಯ ಕುರಿತು ಸಾಕಷ್ಟು ಕೆಲಸ ಮಾಡುತ್ತಿರುವುದು ಪ್ರಸಂಶನೀಯ. ಇಂತಹ ಉತ್ತಮ ಕಾರ್ಯಗಳು ನಿರಂತರ ನಡೆಸುವಂತಾಗಲಿ. ಕುಮಟಾ ಕನ್ನಡ ಸಂಘ ಮಾದರಿ ಸಂಘವಾಗಿ ಜನಮನ್ನಣೆ ಗಳಿಸಲಿ ಎಂದರು.
ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಮಾತನಾಡಿ ತಾಲೂಕಿನಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬಂದಿರುವುದು ಸಂತಸದ ಸಂಗತಿ. ತಾಯಿ ಭುವನೇಶ್ವರಿ ಹೆಸರಲ್ಲಿ ಜನ್ಮ ತಳೆದ ನಮ್ಮ ಸಂಘ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳನ್ನು ಗೌರವಿಸುತ್ತಿರುವುದು ತಾಯಿಯ ಸೇವೆ ಮಾಡಿದಂತೆ ಆಗಿದೆ. ಇಂದು ಸನ್ಮಾನಿತರಾದ ಮುದ್ದು ಮಕ್ಕಳ ಭವಿಷ್ಯ ಉಜ್ವಲವಾಗಲಿ, ಇಂತಹ ಅಪರೂಪದ ಕಾರ್ಯಕ್ರಮ ನಡೆಸಲು ಕಾರಣೀಕರ್ತರಾದ ನಮ್ಮೆಲ್ಲಾ ಸಂಘದ ಸದಸ್ಯರು ಅಭಿನಂದನಾರ್ಹರು ಎಂದರು.
ಸಂಘದ ಉಪಾಧ್ಯಕ್ಷ ಮಂಗಲದಾಸ ನಾಯ್ಕ ಮಾತನಾಡಿ ಪ್ರತಿಯೋಬ್ಬರಲ್ಲೂ ಭಾಷಾಭಿಮಾನ ಇರಲಿ. ಕನ್ನಡ ಮಾಧ್ಯಮದಲ್ಲಿ ಕಲಿತು ಉತ್ತಮ ಫಲಿತಾಂಶ ನೀಡಿದ ಎಲ್ಲರೂ ಅಭಿನಂದನಾರ್ಹರು ಎಂದರು. ಸಂಘದ ಸದಸ್ಯರಾದ ಡಾ ಎಮ್ ಆರ್ ನಾಯಕ, ಜಯದೇವ ಬಳಗಂಡಿ ಮಾತನಾಡಿದರು. ಗೋಕರ್ಣ ಆನಂದಾಶ್ರಮ ಪ್ರೌಢಶಾಲೆಯ ಕುಮಾರ ಪ್ರತ್ವೀಶ ವಿ ದೀಕ್ಷಿತ್,ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಅದ್ವೈತ್ ಆರ್ ಕಡ್ಲೆ,ಗಿಬ್ ಬಾಲಕರ ಪ್ರೌಢಶಾಲೆಯ ವಾಗೀಶ ಶಾನಭಾಗ, ಕೆ.ಪಿ ಎಸ್ ಸಂತೆಗುಳಿ ಪ್ರೌಢಶಾಲೆಯ ಭರತ್ ವಿ ನಾಯ್ಕ, ಸುಮಂತ ಕೃಷ್ಣ ನಾಯ್ಕ, ಗಿಬ್ ಬಾಲಕಿಯರ ಪ್ರೌಢಶಾಲೆಯ ಚಾಂದನಿ ಶ್ರೀಧರ ಕುಮಟಾ,ಜನತಾ ವಿದ್ಯಾಲಯ ಮಿರ್ಜಾನ ಪ್ರೌಢಶಾಲೆಯ ಅಂಕಿತಾ ನಾಗಪ್ಪ ನಾಯ್ಕ,ಗಿಬ್ ಪ್ರೌಢಶಾಲೆಯ ಗಣಪತಿ ವಿ ನಾಯ್ಕ,ಸೆಕೆಂಡರಿ ಹೈಸ್ಕೂಲ ಹಿರೇಗುತ್ತಿಯ ಶಿವಾನಿ ಎಸ್ ಬೆವಿನಮಟ್ಟಿ,ಸರ್ಕಾರಿ ಪ್ರೌಢಶಾಲೆ ಅಘನಾಶಿನಿಯ ಜಾಹ್ನವಿ ಉದಯಕುಮಾರ ಪಟಗಾರ,ಆನಂದಾಶ್ರಮ ಪ್ರೌಢಶಾಲೆಯ ಸಹನಾ ಎಚ್ ಗುನಗಾ,ಸರ್ಕಾರಿ ಪ್ರೌಢಶಾಲೆ ಬರ್ಗಿಯ ಸಂಧ್ಯಾ ಆರ್ ಪಟಗಾರ ಹಾಗೂ ಪ್ರತಿಭಾವಂತ ವಿಧ್ಯಾರ್ಥಿಗಳಾದ ಬರ್ಗಿಯ ಗಣೇಶ ಪ್ರಕಾಶ ಗುನಗಾ,ಗುಡೇಅಂಗಡಿಯ ಪೂರ್ವಿ ಭಟ್ಟ ಇವರನ್ನು ಗೌರವಿಸಲಾಯಿತು.
ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷ ಉದಯ ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ದಯಾನಂದ ದೇಶಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಪೂರ್ವಿ ಭಟ್ಟ ಪ್ರಾರ್ಥಿಸಿದರು. ಉಪಾಧ್ಯಕ್ಷ ಬಾಬು ನಾಯ್ಕ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪಟಗಾರ, ಮಾಧ್ಯಮ ಸಲಹೆಗಾರ ಸಂತೋóಷ ನಾಯ್ಕ,ಸದಸ್ಯರಾದ ಸುರೇಖಾ ವಾರೇಕರ್, ಶಿಕ್ಷಕ ರಾಜು ಶೇಟ್, ನಾಗಪ್ಪ ಮುಕ್ರಿ ಇನ್ನಿತರರು ಇದ್ದರು.