ಹೊನ್ನಾವರ: ಇತ್ತೀಚಿಗೆ ಬೈಪಾಸ್ ಸರ್ಜರಿಗೆ ಒಳಗಾಗಿ ಗುಣಮುಖರಾಗಿ, ಮತ್ತೆ ಆರೋಗ್ಯದಲ್ಲಿ ಚಿಕ್ಕ ವ್ಯತ್ಯಯದಿಂದಾಗಿ ಮೇ 18ರಂದು ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಆರು ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಇಲ್ಲಿಯ ಜನರಲ್ ಮೆಡಿಸಿನ್ ಮತ್ತು ಹೃದಯ ರೋಗ ತಜ್ಞ ವೈದ್ಯ ಡಾ.ಪ್ರಕಾಶ ನಾಯ್ಕ ರವರು ಸುಕ್ರಜ್ಜಿಯವರಿಗೆ ನೀಡಿದ್ದಾರೆ. ಚಿಕಿತ್ಸೆ ಸಂದರ್ಭದಲ್ಲಿ ಬಿಡುಗಡೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ, ಡಾ.ಪ್ರಕಾಶ ನಾಯ್ಕ ಹೂಗುಚ್ಛ ನೀಡಿ ಶುಭ ಹಾರೈಸಿದರು.
ಆಸ್ಪತ್ರೆಯ ಆಡಳಿತ ಅಧಿಕಾರಿ ಶಶಿಕಲಾ ನಾಯ್ಕ, ರಾಜ್ಯ ಸರಕಾರಿ ಹೊನ್ನಾವರ ಶಾಖೆಯ ಚಂದ್ರಶೇಖರ ಕಳಸ ನೌಕರರ ಸಂಘದ
ಯ ಉಪಾಧ್ಯಕ್ಷ ಮತ್ತು ಇತರೆ ಸಿಬ್ಬಂದಿ ವರ್ಗ ಹಾಜರಿದ್ದು, ಸುಕ್ರಜ್ಜಿಯನ್ನು ಬೀಳ್ಕೊಟ್ಟರು. ಬಿಡುಗಡೆಯ ಸಂದರ್ಭದಲ್ಲಿ ಜಾನಪದ ಹಾಡು ಹಾಡುವ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಡನ್ನು ಕೇಳುವ ಸೌಭಾಗ್ಯ ಒದಗಿಬಂತು. ಮೂಲಕ ಪೂರ್ವ ಆಸ್ಪತ್ರೆಯಲ್ಲಿನ ಉತ್ತಮ ಚಿಕಿತ್ಸೆ, ವೈದ್ಯರ ಮತ್ತು ಸಿಬ್ಬಂದಿಗಳ ಕಾಳಜಿ ಆರೈಕೆ ಮತ್ತು ಆಸ್ಪತ್ರೆಯ ಸ್ವಚ್ಛವಾದ ಮತ್ತು ಶಾಂತವಾದ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ದಾಖಲಾದ ವಿಚಾರವನ್ನು ಸುಕಜ್ಜಿಯವರ ಕೋರಿಕೆಯ ಮೇರೆಗೆ ಯಾರಿಗೂ ತಿಳಿಸಲಾಗಿರಲಿಲ್ಲ. ವೈದ್ಯಾಧಿಕಾರಿಗಳು ಸಹ ಅವರು ಸಂಪೂರ್ಣ ಪ್ರಮಾಣದ ವಿಶ್ರಾಂತಿಗೆ ಸೂಚಿಸಿದ್ದರಿಂದ ಚಿಕಿತ್ಸೆ ನೀಡುವವರನ್ನು ಹೊರತುಪಡಿಸಿ ಉಳಿದವರಿಗೆ ಭೇಟಿಗೆ ಅವಕಾಶ ಇರಲಿಲ್ಲ.