ಅಂಕೋಲಾ:ತಾಲೂಕಿನ ಕಸಬಾ ಕೇಣಿಯ ಗಾಂವಕರವಾಡದಲ್ಲಿ ಗದ್ದೆಗೆ ಹೋಗುತ್ತಿದ್ದ ರೈತನೊಬ್ಬ ಕಾಲುಜಾರಿ ಆಯತಪ್ಪಿ ಹಳ್ಳದಲ್ಲಿ ಬಿದ್ದು , ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಸುರೇಶ ವಿಠಲ ಗಾಂವಕರ ಮೃತ ದುರ್ದೈವಿಯಾಗಿದ್ದಾನೆ . ಬಡಕುಟುಂಬದ ಆಧಾರ ಸ್ತಂಭವಾಗಿದ್ದ ರೈತನ ನಿಧನ ವಾರ್ತೆ ಆತನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು, ಕುಟುಂಬದವರಿಗೆ ಸಿಡಿಲು ಎರಗಿದಂತಾಗಿದೆ.

RELATED ARTICLES  ಸಂಸದ ಅನಂತಕುಮಾರ್ ಹೆಗಡೆ ವಿರುದ್ಧದ ವ್ಯರ್ಥಾರೋಪ ಕಾಗೋಡು ತಿಮ್ಮಪ್ಪಗೆ ಶೋಭೆ ತರುವುದಿಲ್ಲ: ದಿನಕರ ಶೆಟ್ಟಿ

ರೈತಾಭಿ ಕೆಲಸ ಮಾಡಿಕೊಂಡಿದ್ದ ಈತ ಮೇ 22 ರಂದು ಬೆಳಿಗ್ಗೆ 6.30ರಿಂದ 7.30 ರ ನಡುವಿನ ಅವಧಿಯಲ್ಲಿ ತನ್ನ ಗದ್ದೆಗೆ ಹೋಗಬೇಕಾದರೆ ಕೇಣಿ ಹಳ್ಳದಲ್ಲಿ ಜಾರಿಬಿದ್ದಿದ್ದು , ತಾಲೂಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದ್ದು ಈ ಕುರಿತು ಮೃತನ ಸಹೋದರ ದಿನಕರ ಗಾಂವಕರ ನೀಡಿದ ದೂರಿನನ್ವಯ,ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಅನೇಕ ವಿದ್ಯಾರ್ಥಿಗಳು, 25 ಶಿಕ್ಷಕರು ಹಾಗೂ 14 ವೈದ್ಯರಿಗೆ ಕೋವಿಡ್..!