ಹೊನ್ನಾವರ : ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯಧಿಕ ಶೇ 98 ಕ್ಕಿಂತ ಹೆಚ್ಚು ಅಂಕ ಪಡೆದು, ತಾವು ಕಲಿತ ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದ, ತಾಲೂಕಿನ ಕರ್ಕಿಯ ಚನ್ನಕೇಶವ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಸಂಪದಾ ರಮೇಶ ನಾಯ್ಕ ಹಾಗೂ ಕುಮಾರ್ ರೋಹನ ಸತೀಶ್ ನಾಯ್ಕ ಈ ಇಬ್ಬರು ವಿದ್ಯಾರ್ಥಿಗಳಿಗೆ ಮನೆಯಂಗಳದಲ್ಲಿ ಪೋಷಕರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ಇತಿಹಾಸದ ದಾಖಲೆಗಳನ್ನು ಮೀರಿಸಿ,ಹೊಸದಾಖಲೆ ಸೃಷ್ಟಿಸಿದ ಈ ವಿದ್ಯಾರ್ಥಿಗಳನ್ನು ಅವರ ಮನೆಯಂಗಳದಲ್ಲಿ ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಿ ಆಶೀರ್ವದಿಸುವ ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಜಾನನಹೆಗಡೆ,ನಿರ್ದೇಶಕರಾದ ಶ್ರೀ ಎನ್.ಎಸ್.ಹೆಗಡೆ,ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಶ್ರೀಕಾಂತ ಮೊಗೇರ,ಮುಖ್ಯಾಧ್ಯಾಪಕರಾದ ಶ್ರೀ ಎಲ್.ಎಮ್.ಹೆಗಡೆ,ಶಿಕ್ಷಕರಾದ ಶ್ರೀ ಶ್ರೀಕಾಂತ ಹಿಟ್ನಳ್ಳಿ,ಶ್ರೀಮತಿ ಸೀಮಾ ಭಟ್ಟ, ಶ್ರೀಮತಿ ಮುಕ್ತಾ ನಾಯ್ಕ ಉಪಸ್ಥಿತರಿದ್ದು ಸನ್ಮಾನಿಸಿ ಶುಭ ಕೋರಿದರು.
2021-22 ನೇ ಶೈಕ್ಷಣಿಕ ವರ್ಷದ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ 88.50 ಶೇಕಡ ಬಂದು ಪರಿಣಾತ್ಮಕವಾಗಿ ಅತ್ಯುತ್ತಮ ಸ್ಥಿತಿಯಲ್ಲಿದೆ. ಕುಮಾರಿ ಸಂಪದಾ ರಮೇಶ ನಾಯ್ಕ 615/625 ಅಂಕ ಪಡೆದು ಇತಿಹಾಸದ ಎಲ್ಲಾ ದಾಖಲೆಗಳನ್ನು ಮುರಿದು ರಾಜ್ಯಕ್ಕೆ 11 ನೇ ಸ್ಥಾನ ಪಡೆದಿದ್ದಾಳೆ. ಹಾಗೆಯೇ ಕುಮಾರ ರೋಹನ ಸತೀಶ ನಾಯ್ಕ 614/625 ಅಂಕ ಪಡೆದು ಇನ್ನು ದಾಖಲೆಗಳನ್ನು ಮುರಿದಿದ್ದಾನೆ.9 ವಿದ್ಯಾರ್ಥಿ/ನಿಯರು 90% ಕ್ಕಿಂತ ಹೆಚ್ಚಿನ ಅಂಕ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಎರಡು ವಿದ್ಯಾರ್ಥಿಗಳು ಗಣಿತ & ಕನ್ನಡದಲ್ಲಿ 100/100, ಸಮಾಜ ವಿಜ್ಞಾನ ದಲ್ಲಿ ಮೂರು ವಿದ್ಯಾರ್ಥಿಗಳು 100/100,ಸಂಸ್ಕೃತದಲ್ಲಿ 07 ವಿದ್ಯಾರ್ಥಿಗಳು100/100 ಅಂಕ ಪಡೆದು ಶ್ರೇಷ್ಠತೆಯನ್ನು ಮೆರೆದಿದ್ದಾರೆ.ಉತ್ತೀರ್ಣರಾದ ಮತ್ತು ಉತ್ತಮ ಸ್ಥಾನ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು.
ಸುದ್ದಿ:- ಎಲ್.ಎಮ್.ಹೆಗಡೆ