ಕುಮಟಾ: ಪಟ್ಟಣ ಸೇರಿದಂತೆ ವಿವಿಧೆಡೆ ಗುರುವಾರ ಧಾರಾಕಾರ ಮಳೆ ಸುರಿ ಯಿತು. ಮಳೆ ಮಾಪನದಲ್ಲಿ ಕುಮಟಾದಲ್ಲಿ ಗುರುವಾರ 24.4 ಮಿಲಿ ಮೀಟರ್ ಮಳೆಯಾಗಿರುವ ವರದಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 2,952.6 ಮಿಲಿ ಮೀಟರ್ ಮಳೆಯಾಗಿದೆ.

RELATED ARTICLES  ಸಮುದ್ರಪಾಲಾಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಲೈಫ್ ಗಾರ್ಡಗಳು.

ಕಳೆದ ವರ್ಷ ಈ ದಿನ 2,928.2 ಮಿಲಿ ಮೀಟರ್ ಮಳೆಯಾಗಿತ್ತು. ಈ ಮಳೆ ತಡವಾಗಿ ನಾಟಿ ಮಾಡಿದ ಭತ್ತದ ಗದ್ದೆಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಅವರು ತಿಳಿಸಿದ್ದಾರೆ.

RELATED ARTICLES  ಅಳಿಯನ ಸಾವಿನಿಂದ ನೊಂದ ಮಾವ ಆತ್ಮಹತ್ಯೆಗೆ ಶರಣು