ಅಂಕೋಲಾ: ಪಟ್ಟಣದ ಜಿಸಿ ಕಾಲೇಜಿನಲ್ಲಿ ಆಹಾರಮೇಳ ಬಹಳ ವಿಶಿಷ್ಠವಾಗಿ ಜರುಗಿತು. ಶಿಕ್ಷಣದ ಜೊತೆ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನವನ್ನು ಕಲಿಯಲು ಇದು ಅನುಕೂಲವಾಯಿತು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ಅಂಕೋಲಾ ಆಹಾರ ಮೇಳದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಿಂದಲೇ ತಿಂಡಿತಿನಿಸುಗಳನ್ನು ಮಾಡಿಕೊಂಡು ಬಂದು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ನಂತರದ ಆಹಾರ ಮೇಳ ಇದಾಗಿದ್ದು ಪಾಲಕರು ಪೋಷಕರು ಸಿಬ್ಬಂದಿ ಮತ್ತು ಇತರರು ವ್ಯಾಪಾರ ನಡೆಯುತ್ತಿರುವ ಸ್ಥಳಕ್ಕೆ ಬಂದು ಬೆಂಬಲಿಸಿದರು.

RELATED ARTICLES  ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು.

ಚಿಕನ್ ಮಸಾಲಾ, ಚಿಕನ್ ಬಿರಿಯಾನಿ, ಕಬಾಬ್, ಬೇರೆ ಬೇರೆ ರೀತಿಯ ರೊಟ್ಟಿಗಳು, ಜ್ಯೂಸ್, ಕೋಲ್ಡ್ ಡ್ರಿಂಕ್ಸ್, ಸಲಾಡ, ಪಾನಿ ಪುರಿ, ಸೇರಿದಂತೆ ಇತರ ತಿಂಡಿ ತಿನಿಸುಗಳು ಮಾರಾಟವಾದವು. ಒಂದು ದಿನ ತರಗತಿಯಿಂದ ಹೊರಗಿದ್ದು ಕಾಲೇಜಿನ ಆವರಣದಲ್ಲಿ ವ್ಯಾಪಾರದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ನಗು ನಗುತ್ತಾ ಗ್ರಾಹಕರನ್ನು ಬರಮಾಡಿಕೊಂಡು ತಂದ ವಸ್ತುಗಳನ್ನು ಮಾರಿ ಲಾಭ ಕಂಡುಕೊಂಡರು. ತರ್ಕಶಾಸ್ತ್ರ ಪ್ರಾಧ್ಯಾಪಕಿ ಸುಗಂಧಾ ನಾಯಕ, ಅರ್ಥಶಾಸ್ತ್ರ ಪ್ರಾಧ್ಯಾಪಕಡಿ.ಪಿ.ಕುಚನಾಡ್, ಪ್ರಾಂಶುಪಾಲ
ಅಶೋಕ ಕುಮಾರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

RELATED ARTICLES  ಗುಲ್ಬರ್ಗಾ ಜಿಲ್ಲೆಯ ಅಫಜಲಪುರ ಗುರುಕುಲ ವಿದ್ಯಾಪೀಠದ ಸ್ನೇಹ ಸಮ್ಮೇಳನಕ್ಕೆ ಉಮೇಶ ಮುಂಡಳ್ಳಿ