ಭಟ್ಕಳ: ತಲಂದಾ ಗ್ರಾಮದ ಗುಡ್ಡ ಪ್ರದೇಶದಲ್ಲಿ ನಡೆದ ಮಹಿಳೆಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು 24 ಗಂಟೆಯೊಳಗಾಗಿ ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಾಗಪ್ಪ ನಾಯ್ಕ ಹಾಗೂ ಮಾಸ್ತಪ್ಪ ನಾಯ್ಕ ಎಂದು ತಿಳಿದು ಬಂದಿದೆ. ಆರೋಪಿ ನಾಗಪ್ಪ ನಾಯ್ಕ ಶನಿವಾರ ರಾತ್ರಿ ತಲಾಂದ ಗ್ರಾಮದ ತನ್ನ ಚಿಕ್ಕಪ್ಪನ ಮನೆಗೆ ಮೃತ ಮಹಿಳೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಯಾವುದೋ ಉದ್ದೇಶಕ್ಕೆ ರಾತ್ರಿ ಹೊತ್ತಿನಲ್ಲಿ ಇಬ್ಬರು ಸೇರಿ ಕೊಲೆ ಮಾಡಿ, ಬೆಳಗಾಗುವುದರೊಳಗಾಗಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಹಿಳೆಯ ಶವವನ್ನು ನಾಶ ಪಡಿಸುವ ಉದ್ದೇಶದಿಂದ ಹತ್ತಿರದ ಮಣ್ಣಿನ ಗುಡ್ಡದ ಮೇಲೆ ಎಸೆದು ಬಂದಿದ್ದಾರೆ. ನಂತರ ಮಂಗಳವಾರ ಬೆಳಿಗ್ಗೆ ಮಹಿಳೆಯ ಮೃತ ದೇಹವನ್ನು ಅಲ್ಲಿನ ಸ್ಥಳೀಯರು ನೋಡಿ ಮಾಹಿತಿ ನೀಡಿದ್ದರು.

RELATED ARTICLES  ಭಟ್ಕಳದಲ್ಲಿ ಹಾಡು ಹಗಲೇ ಮನೆಗೆ ಕನ್ನ ಹಾಕಿದ ಖದೀಮರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪೊಲೀಸರು 24 ಗಂಟೆಯೊಳಗಾಗಿ ಇಬ್ಬರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ಮಹಿಳೆ ಗುರುತು ಪತ್ತೆಯಾಗಿಲ್ಲ. ಪ್ರಕರಣದಲ್ಲಿ ಮೃತ ಪಟ್ಟ ಮಹಿಳೆಯ ಹೆಸರು ವಿಳಾಸ ಈ ವರೆಗೂ ತಿಳಿದು ಬಂದಿಲ್ಲವಾಗಿದ್ದು ಸಾರ್ವಜನಿಕರಿಗೆ ಮೃತ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ, ದೂರವಾಣಿಗೆ ಸಂಖ್ಯೆ: 9480805232, 9480805262ಗೆ ಮಾಹಿತಿ ನೀಡಲು ತಿಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೆಕರ್, ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ನಿರ್ದೇಶನದಂತೆ ಬದರಿನಾಥ ಹೆಚ್ಚುವರಿ ಪೊಲೀಸ ಅಧೀಕ್ಷರು, ಕಾರವಾರ ಹಾಗೂ,ಬೆಳ್ಳಿಯಪ್ಪ, ಕೆ.ಯು ಪೋಲೀಸ ಉಪಾಧೀಕ್ಷಕರು ಭಟ್ಕಳ ವಿಭಾಗ ಇವರ ಮಾರ್ಗದರ್ಶನದಲ್ಲ ಈ ಪ್ರಕರಣದ ತನಿಖಾಧಿಕಾರಿ ಮಹಾಬಲೇಶ್ವರ ಎಸ್.ಎನ್ ರವರು ಪಿ.ಎಸ್. ಐಗಳಾದ ಭರತ ಕುಮಾರ, ರತಾ ಎಸ್ ಕುರಿ ಹಾಗೂ ಸಿಬ್ಬಂದಿಗಳಾದ ವಿನಾಯಕ ಪಾಟೀಲ ಪಿ. ಹೆಚ್, ಮಹೇಶ ಪಟಗಾರ, ವಿನಾಯಕ ನಾಯ್ಕ, ರೇಣುಕಾ ಸೊಬ್ಬಳ, ಸುನೀಲ್ ಬಿ, ವೈ, ಮಂಜುನಾಥ ಪಾಟೀಲ ಇದ್ದರು.

RELATED ARTICLES  ಮಲ್ಲಿಕಾರ್ಜುನ ದೇವರ ಶಿಖರ ಪ್ರತಿಷ್ಠೆ