ಕಾರವಾರ : ಯುದ್ಧನೌಕೆಗಳು ಭಾರತದಲ್ಲಿ ತಯಾರಾಗುವ ಮೂಲಕ ಪ್ರಧಾನಿಯವರ ಆತ್ಮ ನಿರ್ಭರ ಯೋಜನೆ ಹೆಚ್ಚಿನ ಬಲ ನೀಡಿದೆ ಎಂದರು. ಆತ್ಮ ನಿರ್ಭರ ಯೋಜನೆಯ ಅಡಿ ಭಾರತೀಯ ನೌಕೆಗಳ ಅಭಿವೃದ್ಧಿಯಾಗಬೇಕೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆಯ ನೇವೆಲ್ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಯೋಜನೆಗಳ ಬಗ್ಗೆ ಪರಿಶೀಲಿಸಿದರು.
ಎರಡನೇ ದಿನವಾದ ಇಂದು ಸೂರ್ಯೋದಯದ ವೇಳೆ ನೌಕಾ ಪಡೆಯ ಸೇನಾಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಯೋಗ ಮಾಡಿದರು. ಅಲ್ಲದೇ, ಸೀಬರ್ಡ್ ನೌಕಾನೆಲೆಯ ಒಳಗಿರುವ ಕಾಮತ್ ಬೀಚ್ ನಲ್ಲಿ 240ರಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಯೋಗ ಮಾಡಿದರು.
ನಂತರ ಸ್ವದೇಶಿ ನಿರ್ಮಿತ ಕಲ್ವಾರಿ ಕ್ಲಾಸ್ ನ ಸಬ್ ಮೆರಿನ್ ಐಎನ್ಎಸ್ ಖಂಡೇರಿ ಮೂಲಕ ಸಮುದ್ರಯಾನ ಮಾಡಿದರು ಎಂದು ತಿಳಿದು ಬಂದಿದೆ.ಐಎನ್ಎಸ್ ಖಂಡೇರಿ ಈ ಸಬ್ ಮೆರಿನ್ ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮದ ಪ್ರಾಜೆಕ್ಟ್ 75 ಜಲಾಂತರ್ಗಾಮಿ ನೌಕೆಗಳಲ್ಲಿ ಎರಡನೇಯದ್ದಾಗಿದೆ. 2019ರಲ್ಲಿ ಈ ಸಬ್ ಮೆರಿನ್ ಅನ್ನು ರಾಜನಾಥ್ ಸಿಂಗ್ ಅವರೇ ಲೋಕಾರ್ಪಣೆ ಮಾಡಿದ್ದರು.