ಶಿರಸಿ: ಸಂಸದ ಅನಂತಕುಮಾರ ಹೆಗಡೆ ತನ್ನ ಮಾವನೆಂದು ನಂಬಿಸಿ, ಮಹಿಳೆಯೊಬ್ಬಳು ಲಕ್ಷಾಂತರ ರೂ.ಹಣವನ್ನು ವಂಚಿಸಿದ ಘಟನೆ ನಡೆದಿದೆ. ಶಿರಸಿ ಮೂಲದ ರೇಖಾ ಹೆಗಡೆ ಅಲಿಯಾಸ್ ಮೈತ್ರಿ ಎಂಬುವವಳು ಸಂಸದ ಅನಂತಕುಮಾರ ಹೆಗಡೆ ತನ್ನ ಸೋದರ ಸಂಬಂಧಿ ಎಂದು ಪರಿಚಯಿಸಿಕೊಂಡು ಮೈಸೂರಿನಲ್ಲಿ ಕುವೆಂಪು ನಗರ ನಿವಾಸಿ ಶ್ರೀಮತಿ ಮಂಜುಳಾ ಎಂಬುವವರ ಮನೆ ಬಾಡಿಗೆ ಪಡೆದು ವಾಸವಾಗಿದ್ದಳು. ನಂತರ ಸ್ವಂತ ಮನೆ ಕಟ್ಟುವ ಕಾರಣ ಹೇಳಿ 7ಲಕ್ಷ ರೂ.ಗಳನ್ನು ಮಂಜುಳಾ ಬಳಿ ಪಡೆದಿದ್ದಳು.ಹಣವನ್ನು ಮರಳಿ ಕೊಡಲು ಕೇಳಿದಾಗ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ರೇಖಾ ಹೆಗಡೆ ಪರಾರಿಯಾಗಿದ್ದಾಳೆ. ದೂರವಾಣಿ ಮೂಲಕ ಹಣಕ್ಕಾಗಿ ಒತ್ತಾಯಿಸಿದ ನಂತರ 2.5ಲಕ್ಷ ಹಿಂತಿರುಗಿಸಿದ್ದು ಉಳಿದ ಹಣ ಕೇಳಿದರೆ ಮತ್ತೊಮ್ಮೆ ಸಂಸದರ ಹೆಸರು ಹೇಳಿ ಬೆದರಿಕೆ ಹಾಕಿದ್ದಾಳೆ.

RELATED ARTICLES  Software Development Cost

ಈ ಸಂಬಂಧ ಸಂಸದರ ಬಳಿ ಕೇಳಿದಾಗ ಆ ಹೆಸರಿನ ಯಾವ‌ ಮಹಿಳೆಯೂ ಪರಿಚಯವಿಲ್ಲ, ತನ್ನ ಸಂಬಂಧಿಯಲ್ಲ ಎಂಬ ಉತ್ತರ ಬಂದಾಗ ತಾವು ಮೋಸ ಹೋಗಿರುವುದು ಮೈಸೂರಿನ ಮಹಿಳೆಗೆ ಮನವರಿಕೆಯಾಗಿದೆ. ಹಣ ವಂಚನೆ ಹಾಗೂ ಸಂಸದರ ಹೆಸರನ್ನು ದುರುಪಯೋಗ ಮಾಡಿಕೊಂಡು ಗೌರವ ಘನತೆಗೆ ಚ್ಯುತಿ ತರುವ ಕೆಲಸ ಮಾಡಿದ ಆರೋಪದ ಕುರಿತು ಶಿರಸಿ ಪೋಲೀಸ್ ಠಾಣೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲೆಯ ಮೇರೆಗೆ ರೇಖಾ ಹೆಗಡೆ ಅಲಿಯಾಸ್ ಮೈತ್ರಿ ಎಂಬುವವಳ ಹುಡುಕಾಟಕ್ಕಾಗಿ ವಿಶೇಷ ತಂಡ ರಚಿಸಿ ತನಿಖೆ ಮುಂದುವರೆಸಲಾಗಿದೆ.

RELATED ARTICLES  ಯಲ್ಲಾಪುರದಲ್ಲಿ ನಷ್ಟ ತಂದ ಸಿಡಿಲು.