ಸಿದ್ದಾಪುರ : ತಾಲೂಕಿನ ಕಾನಗೊಡಲ್ಲಿ ಕೆರೆ ಬೇಟೆಯ ಸಂದರ್ಭದಲ್ಲಿ ಮೀನು ಸಿಗದ ಕಾರಣಕ್ಕೆ ಜನತೆ ಆಕ್ರೋಶಗೊಂಡು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಕಾನಗೋಡಿನ ಮಾರಿಕಾಂಬಾ ದೇವಸ್ಥಾನದ ಕಮಿಟಿ ಕೆರೆಯಲ್ಲಿ ಮೀನು ಹಿಡಿಯಲು ಸೇವೆ ರೂಪದಲ್ಲಿ ಒಬ್ಬೊಬ್ಬರಿಗೆ 600 ರೂ. ಹಣ ಪಡೆದು ಅವಕಾಶ ನೀಡಿತ್ತು. ಮೀನು ಹಿಡಿಯಲು ಐದುಸಾವಿರಕ್ಕೂ ಹೆಚ್ಚು ಜನ ಕಾನಗೋಡಿನ ಕೆರೆಯಲ್ಲಿ ಸೇರಿದ್ದರು. ಆದರೆ ಕೆರೆಯಲ್ಲಿ ಮೀನು ಸಿಕ್ಕಿರಲಿಲ್ಲ. ಇದರಿಂದ ರೊಚ್ಚಿಗೆದ್ದು ಜನ ದೇವಸ್ಥಾನದ ಕಮಿಟಿಯೊಂದಿಗೆ ಗಲಾಟೆ ಆರಂಭಿಸಿದ್ದು ಮೈ ಕೈ ಮಿಲಾಯಿಸಿ ಕೊಂಡಿದ್ದಾರೆ ಎನ್ನಲಾಗುತ್ತಿದೆ.

RELATED ARTICLES  ಶ್ರೀ ವಿ.ಆರ್.ಡಿ.ಟ್ರಸ್ಟ್ ಇವರಿಂದ ಕುಮಟಾ ಕಣ್ಣಿನ ಆಸ್ಪತ್ರೆಗೆ ವ್ಹೀಲ್‍ಚೇರ್ಸ್ ಕೊಡುಗೆ

ಮೀನು ಸಿಗದ ಕಾರಣ ಹಣ ವಾಪಸ್ ಕೊಡುವಂತೆ ಕಮಿಟಿಯೊಂದಿಗೆ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಲಾಠಿ ಜಾರ್ಜ್ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ಜನ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಘಟನೆಯಲ್ಲಿ ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿವೆ.

RELATED ARTICLES  ಶಾಲಾ ಮಕ್ಕಳಿಗೆ ಜೇನು ಕಡಿತ : 16 ಮಕ್ಕಳು ಅಸ್ವಸ್ಥ