ಬಳ್ಳಾರಿ: ಹೊಸಪೇಟೆ ನಗರದ ಬಸವೇಶ್ವರ ಬಡಾವಣೆಯಲ್ಲಿರುವ ಸ್ಥಳೀಯ ಸ್ವತಂತ್ರ ಹೋರಾಟ ಪತ್ರಿಕೆಯ ಸಂಪಾದಕರಿಗೆ ಪತ್ರದ ಮೂಲಕ ಜೀವ ಬೆದರಿಕೆ ಬಂದಿದೆ. ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ.  ಕಂಪ್ಯೂಟರ್ ನಲ್ಲಿ ಟೈಪ್ ಮಾಡಿರುವ ಈ ಪತ್ರವನ್ನು ಸ್ವತಂತ್ರ ಹೋರಾಟ ಪತ್ರಿಕೆಯ ಕಚೇರಿಗೆ ಕಳಿಸಿಕೊಟ್ಟಿದ್ದಾರೆ ಎಂದು ದೂರಲಾಗಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 06-04-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

 

‘ನೀವು ಹಿಂದುಗಳು ಶಕ್ತಿಶಾಲಿಗಳು ಅಂದುಕೊಂಡರೆ ಅದು ನಿಮ್ಮ ಭ್ರಮೆ. ಆದ್ದರಿಂದ ನಾನು ತಿಳಿಸಿದ ಕೆಲವು ಪತ್ರಿಕೆಗಳು ನಮ್ಮ ಟಾರ್ಗೆಟ್. ಇನ್ನು ಮುಂದೆ ನೀವು ನಿಮ್ಮ ಧರ್ಮದ ಪರವಾಗಿ ಪ್ರಚಾರ ಮಾಡುತ್ತಾ ಹೋದರೆ ನಿಮ್ಮನ್ನು ಬಿಡುವುದಿಲ್ಲ. ಗೌರಿ ಲಂಕೇಶ್ ಕಥೆ ಮುಗಿಯಿತು. ಈಗ ನಿಮ್ಮ ಸಮಯ ಬಂದಿದೆ. ನಿಮಗೆ ಹೆಚ್ಚು ಎನನ್ನೂ ಹೇಳುವುದಿಲ್ಲ. ಮಾಡಿ ತೋರಿಸುತ್ತೇವೆ’, ಎಂದು ಬೆದರಿಸಲಾಗಿದೆ.

RELATED ARTICLES  ಎರಡು ವಾರದ ಹಿಂದೆ ಬಿಡುಗಡೆಯಾದ ಚಿತ್ರದ ನಟಿ ಲಾಡ್ಜ್ ನಲ್ಲಿ ಶವವಾಗಿ ಪತ್ತೆ..!

ಪತ್ರದ ಕಡೆಯಲ್ಲಿ ಅಮೀನ್ ಎಂದು ಬರೆಯಲಾಗಿದೆ. ಕೆಳಗಡೆ ಖಾಸಗಿ ನ್ಯೂಸ್ ಚಾಲನ್ ಹೆಸರು ಸೇರಿದಂತೆ ರಾಜ್ಯ ಮಟ್ಟದ ಪತ್ರಿಕೆಗಳ ಹೆಸರುಗಳನ್ನು ಕೂಡ ಹಾಕಲಾಗಿದೆ ಎಂದು ಪತ್ರಿಕೆ ಸಂಪಾದಕ ಎಸ್ ಎಂ ಮನೋಹರ್ ತಿಳಿಸಿದ್ದಾರೆ.