ದಾಂಡೇಲಿ : ಜೆವಿಡಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ನಗರದ ಸಮಾಜ ಸೇವಕ ಹಾಗೂ ಕಾಮತ್ ರಿಪ್ರೆಶ್‍ಮೆಂಟ್ ಮಾಲಕ ನವೀನ ಕಾಮತ್ ಹಾಗೂ ನಿವೇದಿತಾ ಕಾಮತ್ ದಂಪತಿಗಳ ಸುಪುತ್ರಿ ನಿಕಿತಾ ಕಾಮತ್ ಈಕೆ 14 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಸಿದ್ದಾಪುರದಲ್ಲಿ ನಡೆದ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆಗೈದು ರಾಜ್ಯಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾಳೆ.
ಈಗಾಗಲೆ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡ ನಿಕಿತಾ ಕಾಮತ್ ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ನಗರಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದ ಈಕೆಯನ್ನು ಜೆವಿಡಿ ಆಡಳಿತ ಮಂಡಳಿ, ಶಕ್ಷಕ ವೃಂದ ಹಾಗೂ ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.
ಕಲಾಶ್ರೀ ಸಂಸ್ಥೆಯಿಂದ ಅಭಿನಂದನೆ :
ನಗರದ ಸಾಂಸ್ಕøತಿಕ ಸಂಘಟನೆಯಾದ ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿ, ಸಂಸ್ಥೆಯ ಪದಾಧಿಕಾರಿಗಳಾದ ವಿಷ್ಣುಮೂರ್ತಿ ರಾವ್, ಸುರೇಶ ಕಾಮತ್, ಪ್ರಮೋದ ಶಾನಬಾಗ್, ವಿಶ್ವನಾಥ ಶೆಟ್ಟಿ, ರಾಮಚಂದ್ರ ಹೆಬ್ಬಾರ್, ಗಣೇಶ ಹೆಬ್ಬಾರ, ಉದಯ ಶೆಟ್ಟಿ, ಚಂದ್ರು ಶೆಟ್ಟಿ, ನಾಗರಾಜು ಶೆಟ್ಟಿ, ಬಿ.ಎನ್.ವಾಸರೆ, ಕೀರ್ತಿ ಗಾಂವಕರ, ರೋಶನ್ ಬಾವಾಜಿ, ಸಂಜು ಮೊಗವೀರ, ಶೇಖರ ಪೂಜಾರಿ ಮೊದಲಾದವರು ಹಾಗೂ ನಗರದ ಕೆ.ಸಿ.ಸರ್ಕಲ್ ಗಣೇಶ ಮಂಡಳದ ಪದಾಧಿಕಾರಿಗಳು, ನ್ಯಾಯವಾದಿ ಸೋಮಕುಮಾರ್ ಎಸ್ ಹೀಗೆ ಇನ್ನೂ ಅನೇಕರು ನಿಕಿತಾ ಕಾಮತ್‍ಳ ಸಾಧನೆಯನ್ನು ಬಣ್ಣಿಸಿ ಅಭಿನಂದನೆ ಸಲ್ಲಿಸಿದ್ದಾರೆ.