ದಾಂಡೇಲಿ : ಬದುಕಿಗಾಗಿ ಕಷ್ಟಪಡುವುದರ ಜೊತೆ ಜೊತೆಗೆ ಪ್ರಯಾಣಿಕ ಅನುಕೂಲಕರ ಸೇವೆಯನ್ನು ನೀಡುತ್ತಿರುವ ಆಟೋ ಚಾಲಕರು ಸ್ಥಾಪಿಸಿದ ಆಟೋ ಚಾಲಕರ ಕ್ಷೇಮಾಭಿವೃದ್ದಿ ಸಂಘದ ನೊಂದಣಿಗೆ ಹಾಗೂ ಸಂಘಟನೆಯ ಸಹಕಾರಕ್ಕೆ ಎಲ್ಲ ರೀತಿಯಿಂದ ಸಹಕಾರ ನೀಡುವುದಾಗಿ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ ನುಡಿದರು.

 

ಅವರು ನೂತನವಾಗಿ ಅಸ್ತಿತ್ವಕ್ಕೆ ಬಂದ ಆಟೋ ಚಾಲಕರ ಕ್ಷೇಮಭಿವೃದ್ದಿ ಸಂಘವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಆಟೋ ಚಾಲಕರ ಜೀವನ ಬಹಳ ಕಷ್ಠದ ಜೀವನ. ಅಂದಿನ ದುಡಿಮೆಯಿಂದಲೇ ಅಂದಿನ ಬದುಕು ನಡೆಸಬೇಕು. ಇಂತಹ ಕಷ್ಟದ ಜೀವನ ನಡೆಸುವ ಆಟೋ ಚಾಲಕರ ಪ್ರಾಮಾಣಿಕತೆ ಮತ್ತು ನಿಷ್ಠೆ ಶ್ಲಾಘನೀಯ ಎಂದು ಸಚಿವ ದೇಶಪಾಂಡೆ ಹೇಳಿದರು. ನವೆಂಬರ 1 ರಿಂದ ರಾಜ್ಯದಲ್ಲಿ ಆರೋಗ್ಯ ಭಾಗ್ಯ ಯಜನೆ ಬರಲಿದೆ. ಜನವರಿ 1 ರಿಂದ ದಾಂಡೇಲಿ ತಾಲೂಕು ಅಸ್ತಿತ್ವಕ್ಕೆ ಬರಲಿದೆ. ದಾಂಡೇಲಿ-ಅಳ್ನಾವರ ರೈಲು ಹಳಿಯ ಕೆಲಸ ನಡೆಯುತ್ತಿದ್ದು ಡಿಸೆಂಬರ ಒಳಗೆ ಸಂಚಾರ ಆರಂಭವಾಗಲಿದೆ ಎಂದರು.

RELATED ARTICLES  ದೇವರ ದರ್ಶನಕ್ಕೆ ಹೊರಟವರಿದ್ದ ಟೆಂಪೋ ಪಲ್ಟಿ

 

 

ಮುಖ್ಯ ಅತಿಥಿಗಳಾಗಿದ್ದ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ. ಬಾ.ಜ.ಪ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಜೆ.ಡಿ.ಎಸ್. ಅಧ್ಯಕ್ಷ ರಿಯಾಜ ಶೇಖ ಮಾತನಾಡಿ ಸಂಘಟನೆಗೆ ತಮ್ಮ ಎಲ್ಲ ರೀತಿಯ ಸಹಕಾರವಿದೆ ಎಂದರು. ಆಟೋಚಾಲಕರ ಕ್ಷೇಮಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಸಾಬ್ ಕೇಸನೂರವರು ಅಧ್ಯಕ್ಷತೆ
ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಕಾಂಗ್ರೆಸ್ ಆಧ್ಯಕ್ಷ ಸಯ್ಯದ್ ತಂಗಳ, ನಗರಸಭೆ ಉಪಾಧ್ಯಕ್ಷ ಮಹಮ್ಮದ್ ಗೌಸ್ ಪಣಿಬಂದ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ, ಎ.ಆರ್.ಟಿ.ಓ ಸಿ.ಡಿ. ನಾಯ್ಕ, ಆಟೋ ಚಾಲಕರ ಕ್ಷೇಮಾವೃದ್ದಿ ಸಂಘದ ಅಧ್ಯಕ್ಷ ಬಾಬಾಸಾಬ ಜಮಾದಾರ್, ಆಟೋ ಚಾಲಕರ ಸಂಘಟನೆಯ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ, ಜಿಲ್ಲಾಧ್ಯಕ್ಷ ಮಂಜುನಾಥ ಗೌಡ, ರಾಜ್ಯ ಕಾರ್ಯದರ್ಶಿ ಜೀವನ ಮುಂತಾದವರು ವೇದಿಕೆಯಲಿದ್ದರು. ಅಬ್ದುಲ್ ಸತ್ತಾರ ಕಿತ್ತೂರ ಸ್ವಾಗತಿಸಿ, ನಿರೂಪಿಸಿದರು. ಉಪಾಧ್ಯಕ್ಷ ಶಂಶುದ್ದೀನ ಖತೀಬ ವಂದಿಸಿದರು.

RELATED ARTICLES  ಇಂದಿನಿಂದ ಇಡಗುಂಜಿಯಲ್ಲಿ ಸೇವಾ ಅವಕಾಶ