ಅಂಕೋಲಾ: ವಿಪರೀತ ಸಾಲದಿಂದ ಬೇಸತ್ತ ಗೃಹಣಿಯೊಬ್ಬಳು ಇಲಿ ಪಾಷಾಣ ಔಷಧಿಯನ್ನು ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹಾರವಾಡದ ತರಂಗಮೇಟನಲ್ಲಿ ನಡೆದಿದೆ. ಸುಲೋಚನಾ ಕೀರಾ ಹರಿಕಂತ್ರ ಆತ್ಮಹತ್ಯೆ ಮಾಡಿಕೊಂಡವಳು ಎಂದು ಸ್ಥಳೀಯ ವರದಿ ತಿಳಿಸಿದೆ.
ಮನೆಯ ವ್ಯವಹಾರ ಹಾಗೂ ಸ್ವಂತ ಉದ್ಯೋಗ ಮಾಡುವ ಉದ್ದೇಶದಿಂದ ಸುಲೋಚನಾ ಕೀರಾ ಹರಿಕಂತ್ರ ಅವರು ಸ್ವಸಹಾಯ ಸಂಘಗಳಲ್ಲಿ ಮತ್ತು ಖಾಸಗಿ ಬ್ಯಾಂಕಿನಲ್ಲಿ ಬಂಗಾರ ಅಡವಿಟ್ಟು ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗದೇ ಇದ್ದಾಗ, ಬ್ಯಾಂಕಿನಲ್ಲಿಟ್ಟ ಬಂಗಾರದ ಒಡವೆಗಳು ಹರಾಜಿಗೆ ಬಂದಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಜಿಗುಪ್ಪೆಗೆ ಒಳಗಾಗಿ, ಜೂನ್ 6 ರಂದು ಐಸ್‌ಕ್ರಿಮ್‌ನಲ್ಲಿ ಇಲಿ ಪಾಷಣ ಬೆರಿಸಿಕೊಂಡು ಸೇವಿಸಿದ್ದಳು. ತೀವ್ರ ಅಸ್ವಸ್ಥರಾದ ಈಕೆಯನ್ನು ಅಂಕೋಲಾದ ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 14 ರಂದು ಮಣಿಪಾಲ ಕಸ್ತೂರಬಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.