ಭಟ್ಕಳ: ತಾಲೂಕಿನಲ್ಲಿ ಹುಚ್ಚು ನಾಯಿಯೊಂದು ಐವರನ್ನು ಕಚ್ಚಿ ಗಾಯಗೊಳಿಸಿದ ಘಟನೆ ವರದಿಯಾಗಿದೆ. ಘಟನೆಯು ನಗರದ ಹಳೆ ಬಸ್ ನಿಲ್ದಾಣದ ಬಳಿಯ ಮೀನು ಮತ್ತು ತರಕಾರಿ ಮಾರುಕಟ್ಟೆಯ ಹೊರ ಭಾಗದಲ್ಲಿ ನಡೆದಿದೆ ಎನ್ನಲಾಗಿದೆ. ಗಾಯಗೊಂಡ ನಾಲ್ವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಗಾಯಗೊಂಡವರನ್ನು ಕರಿಕಲ್ ನಿವಾಸಿ ಮಾದೇವ  ಮೊಗೇರ, ಸಿದ್ದೀಕ್ ಸ್ಟ್ರೀಟ್‍ನ ಮುಹಮ್ಮದ್ ಯಾಸೀನ್, ಹನೀಫಾಬಾದ್‍ನ ಮೌಲ್ವಿ ಅಬುಲ್ ಹಸನ್ ನದ್ವಿ, ಮೌಲ್ವಿ ಇಸ್ಮಾಯಿಲ್ ನದ್ವಿ ಎಂದು ಗುರುತಿಸಲಾಗಿದ್ದು ಇನ್ನೋರ್ವ ಮಹಿಳೆಗೆ ಕೂಡಾ ಕಚ್ಚಿದ್ದು ಅವರ ಗುರುತು ಪತ್ತೆಯಾಗಿಲ್ಲ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

RELATED ARTICLES  2 ಲಕ್ಷ ರೂಪಾಯಿ ಮೌಲ್ಯದ ಒಟ್ಟೂ 20 ಮೊಬೈಲ್ ವಾರಸುದಾರರಿಗೆ ಹಸ್ತಾಂತರ : ಕುಮಟಾ ಪೊಲೀಸರ ಚುರುಕಿನ ಕಾರ್ಯಾಚರಣೆ.

ಸ್ಥಳದಲ್ಲಿದ್ದ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಮಾಜಿ ಪ್ರಧಾನ ಕಾರ್ಯದರ್ಶಿ ನಸೀಫ್ ಖಲೀಫಾ ನಾಯಿಯಿಂದ ದಾಳಿಗೊಳಗಾದವರನ್ನು ರಕ್ಷಿಸಿದರು ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪುರಸಭೆಯ ಸಿಬ್ಬಂದಿಗಳು ಹುಚ್ಚು ನಾಯಿಯನನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿದುಬಂದಿದೆ.

RELATED ARTICLES  ಕುಮಟಾದಲ್ಲಿ ಕಳ್ಳರ ಕರಾಮತ್ತು: ನಗದು ಹಾಗೂ ಚಿನ್ನ ಎಗರಿಸಿದ ಕಳ್ಳರು.