ಕಾರವಾರ : ಜಿಲ್ಲೆಯ 29 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಫ್ರಾಂಚೈಸಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತಿಗಳಿದ್ದು, ಅದರಲ್ಲಿ 198 ಪಂಚಾಯತಗಳಲ್ಲಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಂಡು ಕಾರ್ಯಾರಂಭಿಸಿದೆ. ಉಳಿದ ಅಂಕೋಲಾ ತಾಲೂಕಿನ ಮೊಗಟಾ, ಡೋಂಗ್ರಿ, ಅವರ್ಸಾ ಭಟ್ಕಳ ತಾಲೂಕಿನ ಬೆಳೆ, ಹೊನ್ನಾವರ ತಾಲೂಕಿನ ಕರ್ಕಿ, ಕಾರವಾರ ತಾಲೂಕಿನ ವೈಲವಾಡಾ, ಸಿದ್ದಾಪುರ ತಾಲೂಕಿನ ಕಾವಂಚೂರ, ತಂಡಾಗುಂಡಿ, ಮನೆಮನೆ, ಶಿರಸಿ ತಾಲೂಕಿನ ಶಿವಳ್ಳಿ, ಸಾಲ್ಕಣಿ, ಜಾನ್ಮನೆ, ಗುಡ್ಡಾಪುರ, ಇಟಗುಳಿ,ಸುಗಾವಿ, ಮೇಲಿನ ಓಣಿಕೇರಿ, ಯಡಳ್ಳಿ, ಸುಪಾ ತಾಲೂಕಿನ ಗಾಂಡಾ, ಬಜಾರಕುಣಂಗ, ನಾಗೋಡಾ, ನಂದಿಗದ್ದೆ, ಶಿಂಗರಗಾಂವ್, ಯಲ್ಲಾಪುರ ತಾಲೂಕಿನ ಕಣ್ಣಿಗೇರಿ, ಹಿತ್ತಳ್ಳಿ, ದೇಹಳ್ಳಿ, ಹಾಸಣಗಿ, ವಜ್ರಳ್ಳಿ ನಂದೊಳ್ಳಿ, ಮಂಚಿಕೇರಿ (ಕಂಪ್ಲಿ) ಗ್ರಾಮಗಳಲ್ಲಿ ಗ್ರಾಮ್ ಒನ್ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.

RELATED ARTICLES  ಚಿತ್ರಿಗಿ: ಹಬ್ಬದ ಖಾದ್ಯ ಸವಿದ ಸಂಭ್ರಮ: ನೈರ್ಮಲ್ಯ ಪಾಠ ಕಲಿಸಿದ ಮಕ್ಕಳ ಸಂತೆ

ಆಸಕ್ತರು ಜೂ.22 ರೊಳಗಾಗಿ https://
www.karnatakaone.gov.in/Public/
GramOneFranchiseeTerms ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.