ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲಂಬಿ ಸಂವತ್ಸರದ ‘ಕದಿರು ಹರಣೋತ್ಸವ’ ಶಾಸ್ತ್ರೀಯ , ರೂಢಿಗತ ಪರಂಪರೆಯಂತೆ,ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ, ದಿನಾಂಕ 23-09-2017 ಶನಿವಾರ  ಸು-ಸಂಪನ್ನಗೊಂಡಿತು .
      ಬಾವಿಕೊಡ್ಲದ ದೇವರ ಗದ್ದೆಯಲ್ಲಿ ಮುಂಜಾನೆ 06.00 ಘಂಟೆಗೆ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರಿಗೆ ಮೊದಲ ಕದಿರನ್ನು ಸಮರ್ಪಿಸಲಾಯಿತು .
ನಂತರ ಶ್ರೀ ದೇವರ ಉತ್ಸವವು ದಾರಿಯುದ್ದಕ್ಕೂ ಪ್ರಸಾದ ರೂಪದಲ್ಲಿ ನೂತನ ಭತ್ತದ ಕದಿರನ್ನು ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು . ಶ್ರೀ ದೇವಾಲಯದಲ್ಲಿ ಹೊಸ ಕದಿರನ್ನು ಸಮರ್ಪಿಸಿ, ಪೂಜೆ ಸಲ್ಲಿಸಲಾಯಿತು . ವೇ ಕೃಷ್ಣ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು .
DSC 1294
ಎಲ್ಲ ಸಮುದಾಯದ ಜನರು ಶೃದ್ಧಾ ಭಕ್ತಿಗಳಿಂದ ಭಾಗವಹಿಸಿದ್ದರು . 
RELATED ARTICLES  ಒಂದೇ ದಿನ 91 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು.