ಕುಮಟಾ : ಇಲ್ಲಿನ ಟೂರಿಸ್ಟ್ ವಾಹನ ದ ಚಾಲಕನ ಮೇಲೆ ಅನಾವಶ್ಯಕ ವಾಗಿ ಹಲ್ಲೆ ನಡೆಸಿದ ಮಂಕಿ ಪಿಎಸ್ಐ ಕ್ರಮವನ್ನು ಖಂಡಿಸುತ್ತದೆ ಹಾಗೂ ಆರೋಪಿತ ಅಧಿಕಾರಿಯ ಮೇಲೆ ಆದಷ್ಟು ಶೀಘ್ರ ಶಿಸ್ತು ಕ್ರಮ ಕೈ ಗೊಳ್ಳುವಂತೆ ಲೋಕಶಕ್ತಿ ಪಕ್ಷ ಕುಮಟಾ ಘಟಕ ಆಗ್ರಹಿಸುತ್ತದೆ.
ಜೂನ್ 12 ರಂದು ಕುಮಟಾದಿಂದ ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ತಾಲೂಕಿನ ಹೆರವಟ್ಟ್ ಗ್ರಾಮದ ಟ್ಯಾಕ್ಸಿ ಚಾಲಕ ಗಣಪತಿ ಹರೀಶ್ ನಾಯ್ಕ್ ಅವರ ಮೇಲೆ ಅನಂತವಾಡಿ ಯ ಚೆಕ್ ಪೋಸ್ಟ್ ಬಳಿ ಮಂಕಿ ಠಾಣೆಯ ಪಿಎಸ್ಐ ಅಶೋಕ ಅವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವುದು ಅಮಾನವೀಯ ಘಟನೆ ಯಾಗಿದೆ. ಸಮಾಜ ತಲೆತಗ್ಗಿಸುವಂತಾಗಿದೆ. ನಾಗರಿಕ ಸಮಾಜದಲ್ಲಿ ಇಂತ ದುರ್ವರ್ತನೆ ಸಹಿಸಲು ಸಾಧ್ಯವಿಲ್ಲ. ಕೈ ತೋರಿಸಿದ ಜಾಗದಲ್ಲಿ ನಿಲ್ಲಿಸದೇ ಇರುವ ಒಂದೇ ಕಾರಣಕ್ಕೆ ದರ್ಪ ತೋರಿಸುವುದು ಈ ಅಧಿಕಾರಿಗೆ ಶೋಭೆ ತರುವುದಿಲ್ಲ. ಇಂದಿನ ಜನ ಸ್ನ್ಹೇಹಿ ಪೊಲೀಸ್ ವ್ಯವಸ್ಥೆ ಯಲ್ಲಿ ಪೊಲೀಸರ ಈ ಕ್ರಮ ಸಮಾಜದಲ್ಲಿ ಭಯ ಹುಟ್ಟಿಸುವಂತಾಗಿದೆ.
ದರ್ಪ ತೋರುವುದು, ಸುಳ್ಳು ಕೇಸ್ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುವುದನ್ನು ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳು ಬಿಡಬೇಕು. ಜನರೊಂದಿಗೆ ಪ್ರೀತಿಯಿಂದ, ತಾಳ್ಮೆಯಿಂದ ವರ್ತಿಸಬೇಕು. ಪ್ರಸ್ತುತ ದಿನದಲ್ಲಿ ಚಾಲಕರು ಅತ್ಯಂತ ಕಷ್ಟ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಒಳ್ಳೆಯ ಚಾಲಕರೆಂದರೆ ಹಲವರ ಪ್ರಾಣ ರಕ್ಷಿಸುವ ದೇವರು. ಶ್ರೀ ಕೃಷ್ಣ ದೇವರು ಕೂಡ ಅರ್ಜುನ ನ ಚಾಲಕ ರಾಗಿದ್ದನ್ನು ಸ್ಮರಿಸಬಹುದು. ಇಲಾಖೆಗೆ ಬೇಕಾದಾಗಲೆಲ್ಲ ಇವರನ್ನು ಬಾತ್ಮಿ ದಾರರಾಗಿ, ಚಾಲಕರಾಗಿ ಕೆಲವೊಮ್ಮೆ ಉಚಿತ ವಾದ ಸೇವೆ ಪಡೆದು ಕೊಳ್ಳುತ್ತದೆ. ಹೀಗಿರುವಾಗ ಚಾಲಕರ ಸಣ್ಣ ಪುಟ್ಟ ತಪ್ಪು ಗಳಿಗೆ ಹಲ್ಲೆಯ ಮೂಲಕ ಉತ್ತರಿಸುವುದು ಖಂಡನೀಯ. ಆದ್ದರಿಂದ ಇಲಾಖೆ ಆರೋಪಿತ ಪೊಲೀಸ್ ಅಧಿಕಾರಿ ಮೇಲೆ ಶಿಸ್ತು ಕ್ರಮ ಕೈ ಗೊಳ್ಳುವಂತೆ ಲೋಕ್ ಶಕ್ತಿ ಪಕ್ಷದ ಕುಮಟಾ -ಹೊನ್ನಾವರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ದಿನೇಶ್ಚಂದ್ರ ಎನ್ ಅಂಗಡಿಕೇರಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.