ಕಾರವಾರ: ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆಯ ವಿರುದ್ಧ ಬದನಗೋಡ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ, ಶಿರಸಿ ಇನ್ಫೋದ ಅಜಯ್ ಭಟ್ ಸೇರಿದಂತೆ ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಸಂಸ್ಥೆಯ ಘನತೆ- ಗೌರವಗಳಿಗೆ ವ್ಯಾಪಕ ಧಕ್ಕೆ ಉಂಟಾಗಿದ್ದು, ಈ ಬಗ್ಗೆ ಸ್ಕೊಡ್‌ವೆಸ್ ಸಂಸ್ಥೆ ಕಾನೂನು ಹೋರಾಟ ಆರಂಭಿಸಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನೀಡಿದ ಮಾಹಿತಿ.

ಕೆಲವು ದಿನಗಳ ಹಿಂದೆ ಶಿರಸಿ ದಾಸನಕೊಪ್ಪದ ಶ್ರೀ ಬಸವರಾಜ ಬಂಗಾರಸ್ವಾಮಿ ನಂದಿಕೇಶ್ವರಮಠ, ಶಿರಸಿ ಇನ್ಫೋದ ಅಜಯ್ ಭಟ್ ಹಾಗೂ ಇತರ ಕೆಲವರು ಸೇರಿ ಪ್ರತಿಷ್ಠಿತ ಸೈಡ್‌ವೆಸ್ ಸಂಸ್ಥೆಯ ಮುಖ್ಯಸ್ಥ ಡಾ. ವೆಂಕಟೇಶ ನಾಯ್ಕ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್‌ರವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಶಿರಸಿ ಇನ್ಫೋ ಫೇಸ್ ಬುಕ್ ಪುಟದಲ್ಲಿ ವಿಡಿಯೋ ತುಣುಕುಗಳನ್ನು ಪ್ರಕಟಿಸಿ ಸೈಡ್‌ವೆಸ್ ಸಂಸ್ಥೆಯೂ ಸೇರಿದಂತೆ ಡಾ. ವೆಂಕಟೇಶ ನಾಯ್ಕ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರರವರ ಘನತೆ ಗೌರವಗಳಿಗೆ ಧಕ್ಕೆ ಬರುವಂತೆ ಸುದ್ದಿ ಪ್ರಕಟಿಸಿದ್ದರು. ಈ ಸುಳ್ಳು ಸುದ್ದಿಯನ್ನು ಉದ್ದೇಶ ಪೂರ್ವಕವಾಗಿ ಕೆಲವು ವ್ಯಕ್ತಿಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾದ ಪ್ರಚಾರ ಮಾಡಿದ್ದರು.

ಬಸವರಾಜ ನಂದಿಕೆಶ್ವರಮಠ ಎಂಬವರು ಸಲ್ಲಿಸಿದ ದೂರಿನಲ್ಲಿ ಉತ್ತರಕನ್ನಡ ಹಾಗೂ ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೈಡ್‌ವೆಸ್ ಸಂಸ್ಥೆಯು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಮೋಸ ಮಾಡಿರುವುದರಿಂದ ಸಂಸ್ಥೆಯ ಮೇಲೆ ಕ್ರಮ ಕೈಗೊಂಡು ನಷ್ಟವಾದ ಹಣವನ್ನು ವಸೂಲಿ ಮಾಡುವಂತೆ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಡಾ. ವೆಂಕಟೇಶ ನಾಯ್ಕರವರು ಜಿಲ್ಲಾ ನ್ಯಾಯಧೀಶರ ಆಡಳಿತಕ್ಕೆ ನಿಯಂತ್ರಣಕ್ಕೆ ಒಳಪಟ್ಟ ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರಾಗಿದ್ದಾಗ ದೇವಸ್ಥಾನದಲ್ಲೂ ಹಣಕಾಸಿನ ದುರುಪಯೋಗ ಮಾಡಿದ್ದು ಜಿಲ್ಲಾ ನ್ಯಾಯಾಧೀಶರೂ ಸಹ ಡಾ. ವೆಂಕಟೇಶ ನಾಯ್ಕರವರಿಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಿಕೆ ನೀಡಿ ಕಾರ್ಮಿಕ ಸಚಿವ ಶ್ರೀ ಶಿವರಾಮ್ ಹೆಬ್ಬಾರ ಹಾಗೂ ಡಾ. ವೆಂಕಟೇಶ ನಾಯ್ಕರವರು ಕಾರ್ಮಿಕ ಇಲಾಖೆಯಲ್ಲಿಯೂ ವ್ಯಾಪಕ ಭ್ರಷ್ಟಾಚಾರ ಮಾಡಿರುವುದರಿಂದ ಇವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡಿದ್ದರು. ಇದರ ಹಿಂದೆ ಕೆಲವು ಅಧಿಕಾರಿಗಳು, ಕೆಲವು ಮುಖಂಡರು ಹಾಗೂ ಪತ್ರಕರ್ತರು ಎಂದು ಹೇಳಿಕೊಂಡ ಕೆಲವು ವ್ಯಕ್ತಿಗಳು ಪುನಃ ಪುನಃ ಸೈಡ್‌ವೆಸ್ ಸಂಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸುವ, ಒತ್ತಡ ಹೇರುವ ಹಾಗೂ ಬ್ಲಾಕ್‌ಮೇಲ್ ಮಾಡುವ ತಂತ್ರವನ್ನೂ ಅನುಸರಿಸುವಂತಾಗಿದೆ.

RELATED ARTICLES  ಲಾರಿ ಸಾಗುವಾಗ ಕುಸಿದ ಕಿರು ಸೇತುವೆ

ಸೊಡ್‌ವೆಸ್‌ ಸಂಸ್ಥೆ ರಾಷ್ಟ್ರ ಮಟ್ಟದ ಮನ್ನಣೆ ಗಳಿಸಿದ ಸಂಸ್ಥೆಯಾಗಿದ್ದು ಕಳೆದ 15 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದೆ. ರಾಜ್ಯದ 22 ಜಿಲ್ಲೆಗಳು ಸೇರಿದಂತೆ ಗೋವಾ ರಾಜ್ಯದಲ ತನ್ನ ಕಾರ್ಯಾವ್ಯಾಪ್ತಿ ಹೊಂದಿರುವ ಸೈಡ್‌ವೆಸ್ ಸಂಸ್ಥೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕೇಂದ್ರ ಸ್ಥಾನವನ್ನು ಹೊಂದಿದೆ. ಸುಮಾರು 300 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ ಈ ಸಂಸ್ಥೆ ರಾಜ್ಯ ಕೇಂದ್ರ ಸರ್ಕಾರವೂ ಸೇರಿದಂತೆ ಅಂತರ್‌ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

ಗ್ರಾಮೀಣ ಆರೋಗ್ಯ, ಕೃಷಿ, ಸ್ವಯಂ ಉದ್ಯೋಗ ಕೌಶಲ್ಯ ಅಭಿವೃದ್ಧಿ, ಮಹಿಳಾ ಸಶಕ್ತಿಕರಣ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿ, ಎಂಡೋಸಲ್ಫಾನ್ ಬಾಧಿತರ ಪುನರ್ವಸತಿ, ಕಾರ್ಮಿಕ ಕಲ್ಯಾಣ, ಪರಿಸರ, ನೀರು ನೈರ್ಮಲ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐ.ಎಸ್.ಒ. ಪ್ರಮಾಣೀಕೃತ ಸಂಸ್ಥೆಯಾಗಿರುತ್ತದೆ. ತನ್ನ ಕಾರ್ಯದಕ್ಷತೆ, ಪಾರದರ್ಶಕ ಸೇವೆಗೆ ಸಂಬಂಧಿಸಿ ರಾಷ್ಟ್ರಮಟ್ಟದ ಗೈಡ್ ಸ್ಟಾರ್ ಇಂಡಿಯಾ ಪ್ಲಾಟಿನಮ್ ಪ್ರಮಾಣ ಪತ್ರವೂ ಸಹ ಪಡೆದ ಸಂಸ್ಥೆಯಾಗಿರುತ್ತದೆ. ರಾಜ್ಯ ಹಾಗೂ ಕೇಂದ್ರದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸೈಡ್‌ವೆಸ್ ಸಂಸ್ಥೆಯ ವಿರುದ್ಧ ಬಸವರಾಜ ನಂದಿಕೇಶ್ವರಮಠ, ಶಿರಸಿ ಇನ್ಫೋದ ಅಜಯ್ ಭಟ್‌ರವರು ಸೇರಿದಂತೆ ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ವೈರ್‌ಲ್ ಮಾಡಿದ್ದರಿಂದ ಸಂಸ್ಥೆಯ ಘನತೆ ಗೌರವಗಳಿಗೆ ವ್ಯಾಪಕ ಧಕ್ಕೆ ಉಂಟು ಮಾಡಿತ್ತು. ಈ ಬಗ್ಗೆ ಸೈಡ್‌ವೆಸ್ ಸಂಸ್ಥೆ ಕಾನೂನು ಹೋರಾಟ ಆರಂಭಿಸಿದೆ.

ಸರ್ಕಾರಿ ದಾಖಲೆಗಳನ್ನು ಪೋರ್ಜರಿ ಮಾಡಿ ತೇಜೋವಧೆಗೆ ಯತ್ನ:

ಸೊಡ್‌ವೆಸ್‌ ಸಂಸ್ಥೆ, ಸೇರಿದಂತೆ ಡಾ. ವೆಂಕಟೇಶ ನಾಯ್ಕ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರರವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಿ ಸರ್ಕಾರಕ್ಕೆ ದೂರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಉತ್ತರಕನ್ನಡ ಹಾಗೂ ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ದೂರುದಾರರು ಸಲ್ಲಿಸಿದ ದಾಖಲೆಗಳು ದುರುದ್ದೇಶದಿಂದ ಫೋರ್ಜರಿ ಮಾಡಲಾದ ದಾಖಲೆಗಳೆಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸೈಡ್‌ವೆಸ್ ಸಂಸ್ಥೆಯ ಕಾರ್ಯ ಉತ್ತಮವಾಗಿರುವುದರಿಂದ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಸಂದರ್ಭವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ದೂರುದಾರರು ಸಂಸ್ಥೆಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಅಕ್ರಮವಾಗಿ ಬಳಸಿ ಪೋರ್ಜರಿ ಮಾಡಿ ಸಂಸ್ಥೆಯ ತೇಜೋವಧೆ ಮಾಡಿರುವುದು ಸಾಬೀತಾಗಿದೆ.

RELATED ARTICLES  ಅಡಿಕೆ ಧಾರಣೆ ಕುಸಿತ : ಆತಂಕಪಡುವ ಅಗತ್ಯ ಇಲ್ಲ

2 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲು

ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸೈಡ್‌ವೆಸ್ ಸಂಸ್ಥೆ, ಡಾ. ವೆಂಕಟೇಶ ನಾಯ್ಕ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರರವರ ಸಾರ್ವಜನಿಕವಾಗಿ ತೇಜೋವಧೆ ಮಾಡಲು ಮುಂದಾಗಿದ್ದ ಶಿರಸಿ ಬದನಗೋಡ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಮತ್ತು ಶಿರಸಿ ಇನ್ಫೋ ಫೇಸ್ ಬುಕ್ ಪೇಜಿನ ನಿರ್ವಾಹಕ ಅಜಯ್ ಭಟ್ ಎಂಬವರ ಮೇಲೆ ಶಿರಸಿಯ ಮಾನ್ಯ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ 2 ಕೋಟಿ ರೂಪಾಯಿಗಳ ಮಾನ ನಷ್ಟ ಮೊಕದ್ದಮೆ ಸೇರಿದಂತೆ 2 ಸಿವಿಲ್ ಹಾಗೂ 2 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಸರ್ಕಾರಿ ದಾಖಲೆಗಳ ಪೋರ್ಜರಿ ಮಾಡಿದ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಹಿ ಗೂ ಇಲಾಖೆಯ ಪತ್ರವನ್ನೇ ಪೋರ್ಜರಿ ಮಾಡಿದ ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಸ್ಕೊಡ್‌ವೆಸ್ ಸಂಸ್ಥೆಯ ಬೆಳವಣಿಗೆಗೆ ಧಕ್ಕೆ ತರುವ ಉದ್ದೇಶದಿಂದಲೇ ಕೆಲವು ಕಿಡಿಗೇಡಿಗಳು ಸಂಸ್ಥೆಯ ದಾಖಲೆಗಳನ್ನು ಕದಿಯುವುದು, ಕದ್ದ ದಾಖಲೆಗಳನ್ನು ಪೋರ್ಜರಿ ಮಾಡಿ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಬೇನಾಮಿ ದೂರು ನೀಡುವುದು, ಸಂಸ್ಥೆಯ ಸಿಬ್ಬಂದಿಗಳ ಕಾರ್ಯಚಟುವಟಿಕೆಗಳಿಗೆ ಅಡ್ಡಿ ಮಾಡುವುದು, ಸಂಸ್ಥೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದು, ಸೇರಿದಂತೆ ವಿವಿಧ ರೀತಿಯ ಬ್ಲಾಕ್‌ಮೇಲ್ ತಂತ್ರಗಳನ್ನು ಮಾಡುತ್ತಿರುವುದು ಈಗಾಗಲೇ ಸಂಸ್ಥೆಯ ಗಮನಕ್ಕೆ ಬಂದಿದ್ದು ಅಂತಹವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ. ಅಲ್ಲದೇ ಅಗತ್ಯ ಬಿದ್ದಲ್ಲಿ ನ್ಯಾಯಾಲಯದಲ್ಲೂ ಮೊಕದ್ದಮೆ ದಾಖಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಯೋಜನಾ ನಿರ್ದೇಶಕಿ ಮಾಲತಿ ಕರ್ಕಿ, ಕಾರ್ಯಕ್ರಮ ಅಧಿಕಾರಿ ರಿಯಾಜ್ ಮಾತನಾಡಿ, ಸುಖಾ ಸುಮ್ಮನೆ ಸಂಸ್ಥೆಯ ಹೆಸರು ಹಾಳು ಮಾಡಬಾರದು. 300ಕ್ಕೂ ಹೆಚ್ಚು ಜನರು ಸಂಸ್ಥೆಯಲ್ಲಿ ಉದ್ಯೋಗ ಕಂಡುಕೊಂಡಿದ್ದು, ಶ್ರಮಪಟ್ಟು ದುಡಿಯುತ್ತಿದ್ದಾರೆ. ಸಂಸ್ಥೆಯ ವಿರುದ್ಧ ಅಪಪ್ರಚಾರದಿಂದ ಮನಸ್ಸಿಗೆ ನೋವಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಸುಧೀರ ಶೆಟ್ಟಿ, ಪ್ರಜ್ಞಕುಮಾರ್, ಕುಮಾರ್ ಪಟಗಾರ ಇದ್ದರು.