ಆರ್.ಕೆ.ಬಾಲಚಂದ್ರ,

ಐಬಿಪಿಎಸ್ ಮೂಲಕ ಗ್ರಾಮೀಣ ಬ್ಯಾಂಕುಗಳಲ್ಲಿ 8,106 ಹುದ್ದೆಗಳಿಗೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

2017ರಲ್ಲಿ ಐಬಿಪಿಎಸ್, ನೇಮಕಕ್ಕೆ ಅಧಿಸೂಚನೆ ಹೊರಡಿಸಿದಾಗ 15,332 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. 2018ರಲ್ಲಿ ಅದು ಕೇವಲ 10,190ಕ್ಕೆ ಇಳಿಯಿತು. 2019 ರಲ್ಲಿ 8,400 ಹಾಗೂ 2020 ರಲ್ಲಿ 9638 ಹುದ್ದೆಗಳಿಗೆ ಪರೀಕ್ಷೆ ನಡೆಸಿದರೆ 2021 ರಲ್ಲಿ 12,810 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿತು. ಇದೀಗ 2022ನೇ ಸಾಲಿನ 8,106 ಹುದ್ದೆಗಳಿಗೆ ನೇಮಕ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ವರ್ಷ ದಿಂದ ವರ್ಷಕ್ಕೆ ನೇಮಕಾತಿಯಲ್ಲಿ ಇಳಿಮುಖ ವಾಗಿರೋದನ್ನ ಸ್ಪಷ್ಟವಾಗಿ ಕಾಣಬಹುದು.

ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿ ಹುದ್ದೆ ಗಳಿಗೆ ಅರ್ಜಿ ಕರೆಯಲಾಗಿದೆ.
ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ದೇಶದ 43 ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್‌ ಆ‌ರ್ ಬಿ) ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್ ) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ.

ಜೂನ್ 7ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜೂನ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಪರೀಕ್ಷೆ ನಡೆಸಿ, ನವೆಂಬರ್‌ನಲ್ಲಿ ಸಂದರ್ಶನ ನಡೆಸಲು ಐಬಿಪಿಎಸ್ ನಿರ್ಧರಿಸಿದೆ. ರಾಜ್ಯದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಐಬಿಪಿಎಸ್‌ ನೀಡಿದೆ.

ಹುದ್ದೆ ವಿವರ:

ಈ ಬಾರಿ 8,106 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಪ್ರಕಟಿಸಲಾಗಿದೆ. ಇದರಲ್ಲಿ
ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಹುದ್ದೆಗಳ ಸಂಖ್ಯೆಯೇ 4483, ಆಫೀಸರ್ ಸ್ಕೇಲ್-I ರ ಹುದ್ದೆ 2676, ಆಫೀಸರ್ ಸ್ಕೇಲ್-II ರ ಹುದ್ದೆ 867 ಮತ್ತು ಆಫೀಸರ್ ಸ್ಕೇಲ್-IIIರ 80 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿನ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ನಡೆಯಲಿದೆ. ರಾಜ್ಯದ ಎರಡು ಬ್ಯಾಂಕುಗಳಲ್ಲಿ 832 ಹುದ್ದೆಗಳು ಖಾಲಿ ಇವೆ, ಇದರಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ಸಂಖ್ಯೆಯೇ 173, ಆಫೀಸರ್ ಸ್ಕೇಲ್-Iರ 429 ಮತ್ತು ಆಫೀಸರ್ ಸ್ಕೇಲ್-II ರ 230 (ಜನರಲ್ ಬ್ಯಾಂಕಿಂಗ್) ಹುದ್ದೆಗಳಿಗೆ ನೇಮಕ ನಡೆಯಲಿದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ?

ಪೂರ್ವಭಾವಿ ಪರೀಕ್ಷೆ:

ಬೆಂಗಳೂರು,ಬೆಳಗಾವಿ,ಬೀದರ,
ದಾವಣಗೆರೆ ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಡ್ಯ ಮೈಸೂರು,ಶಿವಮೊಗ್ಗ
ಮಂಗಳೂರು ಮತ್ತು ಉಡುಪಿ.

ಮುಖ್ಯಪರೀಕ್ಷೆ: ಬೆಂಗಳೂರು,ಬೆಳಗಾವಿ,
ದಾವಣಗೆರೆ ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮೈಸೂರು,ಶಿವಮೊಗ್ಗ.

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್‌ಸಿ/ಎಸ್‌ಟಿ/ವಿಕಲಚೇತನರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ.ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆನ್‌ ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ವಯೋಮಿತಿ:

ಆಫೀಸ್‌ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗೆ 18ರಿಂದ 28 ವರ್ಷ. ಆಫೀಸರ್ ಸ್ಕೇಲ್-I ಹುದ್ದೆಗೆ ಅಭ್ಯರ್ಥಿಗಳು 18ರಿಂದ 30 ವರ್ಷದೊಳಗಿನವರಾಗಿರಬೇಕು ಆಫೀಸರ್ ಸ್ಟೇಲ್- II ಹುದ್ದೆಗೆ 21ರಿಂದ 32 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಹಾಗೂ ಆಫೀಸರ್ ಸ್ಟೇಲ್ – III ಹುದ್ದೆಯ ಆಕಾಂಕ್ಷಿಗಳು 21ರಿಂದ 40 ವರ್ಷದೊಳಗಿನವರಾಗಿರಬೇಕು.

ಪರೀಕ್ಷಾ ಪೂರ್ವ ತರಬೇತಿ:

ಐಬಿಪಿಎಸ್ ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್ ) ಮತ್ತು ಆಫೀಸ‌ರ್ ಸ್ಕೇಲ್-I ಹುದ್ದೆಗಳಿಗೆ ತರಬೇತಿ ಪಡೆಯಬಹುದು. ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್‌ ಲೈನ್ ನಲ್ಲಿಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು,ತರಬೇತಿ ಸ್ಥಳದ ಖರ್ಚು ವೆಚ್ಚಗಳನ್ನು ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.

ಅರ್ಹತೆಗಳೇನು?

ಆಫೀಸ್ ಅಸಿಸ್ಟೆಂಟ್: ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಸ್ಥಳೀಯ ಭಾಷೆಯನ್ನು ತಿಳಿದಿರಬೇಕಾದುದು ಅವಶ್ಯಕ. ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕು.

ಆಫೀಸರ್ ಸ್ಕೇಲ್-I: ಕೃಷಿ, ತೋಟಗಾರಿಕೆ, ಅರಣ್ಯ, ಪ್ರಾಣಿಶಾಸ್ತ್ರ, ಪಶು ವಿಜ್ಞಾನ, ಅಗ್ರಿಕಲ್ಟರ್ ಎಂಜಿನಿಯರಿಂಗ್, ಪಿಸಿಕಲ್ಟರ್, ಅಗ್ರಿಕಲ್ಟರ್ ಮಾರ್ಕೆಟಿಂಗ್ ಆ್ಯಂಡ್ ಕೋ-ಆಪರೇಷನ್, ಇನ್‌ಫಾರ್ಮೇಷನ್‌ ಟೆಕ್ನಾಲಜಿ, ಮ್ಯಾನೇಜ್ ಮೆಂಟ್ ಲಾ, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ-ಈ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಪಡೆದವರು ಆಫೀಸರ್ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

ಆಫೀಸರ್ ಸ್ಕೇಲ್ – II: ಅಂಗೀಕೃತ ವಿವಿಯಿಂದ ಶೇಕಡಾ 50 ಅಂಕಗಳೊಂದಿಗೆ ಪದವಿ ಪಡೆದಿರುವುದು ಕಡ್ಡಾಯ. ಆಫೀಸರ್ ಸ್ಕೇಲ್-I ಗೆ ತಿಳಿಸಿದ ವಿಷಯಗಳಲ್ಲಿ ಪದವಿ ಪಡೆದಿದ್ದರೆ ನೇಮಕದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಎರಡು ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು. ಆಫೀಸರ ಸ್ಕೇಲ್-II ನ ಸ್ಪೆಷಲಿಸ್ಟ್ ಆಫೀಸರ್‌ಗಳಾದ ಇನ್ ಫಾರ್ಮೇಷನ್ ಆಫೀಸರ್, ಚಾರ್ಟಡ್ ಅಕೌಂಟೆಂಟ್, ಲಾ ಆಫೀಸರ್, ಟ್ರೇಸರಿ ಆಫೀಸರ್, ಮಾರ್ಕೆಟಿಂಗ್ ಆಫೀಸರ್ ಮತ್ತು ಅಗ್ರಿಕಲ್ಚರ್ ಆಫೀಸರ್ ಹುದ್ದೆಗಳಿಗೆ ಪದವಿ ಮತ್ತು ಒಂದು ವರ್ಷದ ಸೇವಾನುಭವ ಹೊಂದಿರಬೇಕು.

ಆಫೀಸರ್ ಸ್ಕೇಲ್-III: ಮಾರ್ಕೆಂಟಿಂಗ್ ಫೈನಾನ್ಸ್, ಅಗ್ರಿಕಲ್ಚರ್ ಹಾರ್ಟಿಕಲ್ಟರ್, ಫಾರೆಸ್ಟ್ರಿ ಅಗ್ರಿಕಲ್ಟರ್, ಅಗ್ನಿಕಲ್ಚರಲ್ ಮಾರ್ಕೆಟಿಂಗ್, ಕೊ ಆಪರೇಷನ್, ಇನ್‌ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್‌ಮೆಂಟ್ ಮತ್ತು ಕಾನೂನು ವಿಷಯವ ಶೇ. 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ ಬ್ಯಾಂಕ್‌ ಅಥವ ವಿತ್ತೀಯ ಸಂಸ್ಥೆಗಳಲ್ಲಿ ಐದು ವರ್ಷ ಕಾರ್ಯನಿರ್ವಹಿಸಿ ಅನುಭವ ಹೊಂದಿರಬೇಕು.

ಈ ಬಾರಿಯ ಬದಲಾವಣೆಗಳೇನು?:

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:
ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್‌ನ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಸ್ಥಳದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಆಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು.

ಮುಖ್ಯ ಸೂಚನೆಗಳು:

● ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆ ಎರಡಕ್ಕೂ ಅರ್ಜಿ ಸಲ್ಲಿಸಬಹುದು. ಆದರೆ ಆಫೀಸರ್ ಕೇಡರ್ ನಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

● ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್-Iಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕಾದುದು ಕಡ್ಡಾಯ.
● ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್-I ಕ್ಕೆ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಹೊಂದಿರುವುದು ಅವಶ್ಯ. 8ನೇ ತರಗತಿಯವರೆಗೆ ಅಥವಾ ಅದಕ್ಕೂ ಮೇಲ್ಪಟ್ಟು ಸ್ಥಳೀಯ ಭಾಷೆಯ ಮಾಧ್ಯಮದಲ್ಲಿ ಓದಿದವವರನ್ನು ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಪಡೆದ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ.
● ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಯು ಪ್ರವೇಶಪತ್ರದ ಜತೆಗೆ ನೀಡಲಾಗುವ ‘ಮಾಹಿತಿ ಕೈಪಿಡಿ’ಯಲ್ಲಿ ಇರುತ್ತದೆ.
● ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸುವಾಗ ಅಭ್ಯರ್ಥಿಯು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಈ ಹುದ್ದೆಯ ನೇಮಕ ಪ್ರಕ್ರಿಯೆಯಲ್ಲಿ ಸಂದರ್ಶನ ಇರುವುದಿಲ್ಲ. ಆಫೀಸರ್ ಸ್ಟೇಲ್-1 ಹುದ್ದೆಗೆ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಅಂತಿಮ ಆಯ್ಕೆ ಪಟ್ಟೆ ಪ್ರಕಟಿಸಲಾಗುತ್ತದೆ.
● ಹೆಚ್ಚಿನ ಮಾಹಿತಿಯನ್ನು ಐಬಿಪಿಎಸ್ ನ ಅಧೀಕೃತ ವೆಬ್ ಸೈಟ್ ನಲ್ಲಿ ಪಡೆದು ಅರ್ಜಿ ಸಲ್ಲಿಸಿ.
● ಲಿಂಕ್‌: https://www.ibps.in/

RELATED ARTICLES  ಹೆಚ್’ಎಂಟಿಯಲ್ಲಿ ಸ್ಪೆಷಲಿಸ್ಟ್ ಟ್ರೈನಿ ಹುದ್ದೆಗಳಿಗೆ ನೇಮಕಾತಿ.

● ಹೆಚ್ಚಿನ ಮಾಹಿತಿಗೆ ವೆಬ್: https://www.ibps.in/

 

 

ಎರಡನೇಯ ಸಂಚಿಕೆ:

ಗ್ರಾಮೀಣ ಬ್ಯಾಂಕ್ ಪರೀಕ್ಷೆ ಸಿದ್ದತೆ ಹೇಗೆ?

ಬ್ಯಾಂಕ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ (ಆರ್‌ಆರ್‌ಬಿ) ಖಾಲಿ ಇರುವ ನಾನಾ ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಿದ್ದು ಸರಿ ಸುಮಾರು 8106 ಹುದ್ದೆಗಳಿಗೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಪೂರ್ವ ಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 832 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಫೀಸ್ ಅಸಿಸ್ಟೆಂಟ್ ಅಂದರೆ ಮಲ್ಟಿ ಪರ್ಪಸ್ ಗೆ 173( ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 104 ಹಾಗೂ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ 69) ಹುದ್ದೆಗಳಿದ್ದು ಆಫೀಸರ್ -ಸ್ಕೇಲ್-1 ಗೆ 429 ಹುದ್ದೆಗಳಿವೆ.( ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 231 ಹಾಗೂ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ 198) ಆಫೀಸರ್ -ಸ್ಕೇಲ್-II ಗೆ 230 ಹುದ್ದೆಗಳಿವೆ.( ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 151 ಹಾಗೂ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ 79).
ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ (ಬೆಂಗಳೂರು,ಬೆಳಗಾಂ,ಬಿದರ,ದಾವಣಗೆರೆ,ದಾರವಾಡ,ಗುಲ್ಬರ್ಗಾ,ಹುಬ್ಬಳ್ಳಿ,ಮಂಡ್ಯ,ಮಂಗಳೂರು,ಮೈಸೂರು ,ಶಿವಮೊಗ್ಗ,ಮತ್ತು ಉಡುಪಿ )ಪೂರ್ವಭಾವಿ ಪರೀಕ್ಷೆ ಮತ್ತು 9 ಜಿಲ್ಲಾ ಕೇಂದ್ರಗಳಲ್ಲಿ(ಬೆಂಗಳೂರು,ಬೆಳಗಾಂ,ದಾವಣಗೆರೆ,ದಾರವಾಡ,ಗುಲ್ಬರ್ಗಾ,ಹುಬ್ಬಳ್ಳಿ,ಮೈಸೂರು,ಶಿವಮೊಗ್ಗ,ಮತ್ತು ಉಡುಪಿ ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.
ಇದರ ಬೆನ್ನಲ್ಲೇ ಸಾಲು-ಸಾಲಾಗಿ ಬ್ಯಾಂಕ್ ನೇಮಕಾತಿ ಪರೀಕ್ಷೆ ಗಳಿಗೆ ಅಧಿಸೂಚನೆ ಪ್ರಕಟವಾಗಲಿದೆ. ಸಾಮಾನ್ಯವಾಗಿ ಪದವಿ ಮುಗಿಸಿದ ಅಭ್ಯರ್ಥಿಗಳು ಮೊದಲ ಬಾರಿಗೆ ಈ ಪರೀಕ್ಷೆಗಳನ್ನು ಎದುರಿಸುವಾಗ ಸಹಜವಾಗಿಯೇ ಆತಂಕಗಳು ಎದುರಾಗಿರುತ್ತವೆ. ಇರುವ 832 ಹುದ್ದೆಗಳಿಗೆ ಲಕ್ಷಗಟ್ಟಲೆ ಅಭ್ಯರ್ಥಿಗಳು ಅರ್ಜಿ ಹಾಕಿರ್ತಾರೆ.ಹೀಗಿರುವಾಗ ನನಗೆ ಈ ಹುದ್ದೆಯನ್ನ ಪಡೆಯಲು ಸಾದ್ಯವೇ….? ಎಂಬ ಪ್ರಶ್ನೆ ಪ್ರತಿಯೊಬ್ಬರನ್ನ ಕಾಡುತ್ತಿರುತ್ತದೆ.ಇದು ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಯನ್ನ ಮೊದಲ ಬಾರಿಗೆ ಬರೆಯುವವರಿಗೆ ಕಾಡುವ ಮಿಲಿಯನ್ ಡಾಲರ್ ಪ್ರಶ್ನೆ. ಇದು ಸಹಜ, ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೂ ಹೀಗೆ ಅನ್ನಿಸಿದ್ದರೆ ಆಶ್ಚರ್ಯ ವಿಲ್ಲ. ಬ್ಯಾಂಕ್ ಕೆಲಸವೆಂದರೆ ಅತ್ಯಂತ ಪ್ರತಿಷ್ಠಿತ ಕೆಲಸವೆಂದೇ ಜನಜನಿತ. ಹೀಗಾಗಿಯೇ ಒಂದು ಹುದ್ದೆ ಖಾಲಿ ಇದ್ದರೂ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಅಧಿಸೂಚನೆ ಪ್ರಕಟವಾದಾಗ ಅರ್ಜಿ ಸಲ್ಲಿಸಿದ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಕೆಲವೇ ಕೆಲವು ಸಾವಿರ ಜನ ಮಾತ್ರ ಅಂತಿಮ ಸುತ್ತಿಗೆ ಆಯ್ಕೆಯಾಗುತ್ತಾರೆ.
ಅರ್ಹತೆ ಏನು?
ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು. ಜತೆಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಹೊಂದಿರಬೇಕು. ಸ್ಥಳೀಯ ಭಾಷೆಯಲ್ಲಿ ಬರೆಯಲು ಮತ್ತು ಓದಲು ತಿಳಿದಿರಬೇಕು. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 18 ರಿಂದ 28 ವರ್ಷ ಮತ್ತು ಆಫೀಸರ್ ಹುದ್ದೆಗೆ 18ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು,ಆಫೀಸರ್ ಸ್ಕೆಲ್ IIಹುದ್ದೆಗೆ 21ರಿಂದ 32± ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. (ಮೀಸಲಾತಿ ನಿಯಮಗಳು ಅನ್ವಯಿಸುತ್ತವೆ).
ವಯೋಮಿತಿ ಸಡಿಲಿಕೆ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಮಗವಿಕಲರಿಗೆ 10 ವರ್ಷಗಳು.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹850, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ₹175.
ಅರ್ಜಿ ಸಲ್ಲಿಸಲು ಕೊನೆಯ ದಿನ: 28-06-2021, ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬೇಕಿರುತ್ತದೆ.
ಅಧಿಸೂಚನೆಯ ಲಿಂಕ್‌: https://www.ibps.in/

ಹೆಚ್ಚಿನ ಮಾಹಿತಿಗೆ ವೆಬ್: https://www.ibps.in/

ಈ ಬಾರಿಯ ಬದಲಾವಣೆಗಳೇನು?:
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:
ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್‌ನ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಸ್ಥಳದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಆಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು
ಹಾಗಾದರೆ ಬ್ಯಾಂಕ್‌ ಜಾಬ್‌ ಪಡೆದು ಕೊಳ್ಳುವುದು ಕಷ್ಟನಾ?
ಖಂಡಿತಾ ಇಲ್ಲ, ಆದರೆ ಇದರ ತಯಾರಿ ಮಾತ್ರ ಸ್ವಲ್ಪ ಭಿನ್ನವಾಗಿರುತ್ತದೆ. ಇಲ್ಲಿಯವರೆಗೆ ನಾವು ಓದಿರುವ ಪದವಿಯವರೆಗಿನ ಪರೀಕ್ಷೆಗಳು 3 ತಾಸಿನ ಪ್ರಶ್ನೆ ಪತ್ರಿಕೆಗೆ ವಿವರವಾಗಿ ಉತ್ತರ ಬರೆದು ಅಭ್ಯಾಸವಾಗಿರುತ್ತದೆ. ಈ ಪರೀಕ್ಷೆಗಳು ಹೆಚ್ಚೆಂದರೆ 20 ರಿಂದ 25 ಪ್ರಶ್ನೆಗಳಿದ್ದು ಅವುಗಳಲ್ಲೂ ನಮಗೆ ಆಯ್ಕೆಯ ಅವಕಾಶಗಳಿರುತ್ತವೆ. ಆದರೆ ಬ್ಯಾಂಕ್ ಪರೀಕ್ಷೆ ಅತಿ ಕಡಿಮೆ ಅವಧಿ ಯಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಗುರುತಿಸಬೇಕಿರುತ್ತದೆ. ಅಲ್ಲದೆ ಬಿಡಿಸಿದ ಪ್ರಶ್ನೆಗಳಿಗೆ ಉತ್ತರ ಸರಿಯಾಗಿರಲೇಬೆಕಾದುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಬ್ಯಾಂಕ್ ಪರೀಕ್ಷೆಗಳಲ್ಲಿ ನೆಗೆಟಿವ್ ಮಾಕ್ಸ್ (ಋಣಾತ್ಮಕ ಮೌಲ್ಯಮಾಪನ) ಇರುತ್ತದೆ. ಪದವಿ ಪರೀಕ್ಷೆಗಳಲ್ಲಿ ಇ ರೀತಿಯಾಗಿ ಇರೋದಿಲ್ಲ. ಹಾಗಾಗಿ ಋಣಾತ್ಮಕ ಮೌಲ್ಯಮಾಪನದ ಕುರಿತಂತೆ ಧನಾತ್ಮಕ ಚಿಂತನೆ ಇರಬೇಕಾದುದು ಮೊದಲ ಆದ್ಯತೆ.
ಪರೀಕ್ಷಾ ವಿಧಾನವೇನು?

ಬ್ಯಾಂಕಿಂಗ್ ಪರೀಕ್ಷೆಗಳು IAS ಹಾಗೂ KAS ಮಾದರಿಯಲ್ಲಿ ಎರಡು ಹಂತಗಳಲ್ಲಿ ನಡೆಯಲಿವೆ.ಪೂರ್ವಭಾವಿ (prelims), ಮುಖ್ಯ ಪರೀಕ್ಷೆ (mains). ಐಬಿಪಿಎಸ್‌ನ ಹಾಗೂ ಆರ್‌ ಆರ್‌ ಬಿ ಯ ಗುಮಾಸ್ತ ಹುದ್ದೆಗೆ ಸಂದರ್ಶನ ಇರುವುದಿಲ್ಲ. ಪೂರ್ವಭಾವಿ ಪರೀಕ್ಷೆ ಮೊದಲ ಹಂತದ ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಅಭ್ಯರ್ಥಿಗಳನ್ನು 1:20 ರಂತೆ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಪೂರ್ವಭಾವಿಯಲ್ಲಿ ಪಡೆದ ಅಂಕಗಳು ಅರ್ಹತಾ ಪಟ್ಟಿಗೆ ಮಾತ್ರ ಮೀಸಲಾಗಿದ್ದು ಅದರಲ್ಲಿ ಪಡೆದ ಅಂಕಗಳನ್ನು ಮುಂದೆ ಪರಿಗಣಿಸಲಾಗುವುದಿಲ್ಲ. ಎರಡೂ ಪರೀಕ್ಷೆಗೂ ಅಷ್ಟೆ ಮಹತ್ವ ನೀಡಬೇಕು ಎಂಬುದನ್ನು ಖಂಡಿತಾ ಮರೆಯದಿರಿ.
Exam pattern ಹೇಗಿದೆ?
ಆರ್ ಆರ್ ಬಿ ಯ ಪೂರ್ವಭಾವಿ ( Prelims)ಪರೀಕ್ಷೆಯು ಎರಡು ಪತ್ರಿಕೆಗಳನ್ನು ಹೊಂದಿದ್ದು ಕ್ರಮವಾಗಿ ರೀಸನಿಂಗ್ ಹಾಗೂ ನ್ಯೂಮರಿಕಲ್ ಎಬಿಲಿಟಿ ವಿಷಯಗಳನ್ನು ಒಳಗೊಂಡಿರುತ್ತದೆ.ಪ್ರಶ್ನೆ ಗಳು ಕ್ರಮವಾಗಿ 40 ರಂತೆ ಒಟ್ಟು 80 ಪ್ರಶ್ನೆ ಗಳಿದ್ದು 80 ಅಂಕಗಳಿಗೆ ಸೀಮಿತವಾಗಿವೆ. ಒಟ್ಟು ಸಮಯ 45 ನಿಮಿಷಗಳನ್ನು ನಿಗದಿ ಪಡಿಸಲಾಗಿದೆ. ಐ ಬಿ ಪಿ ಎಸ್ ಸಂಸ್ಥೆ ಪ್ರತಿ ಪತ್ರಿಕೆಗೂ ನಿರ್ದಿಷ್ಟ ಸಮಯವನ್ನು ಕೆಲವೊಮ್ಮೆ ನಿಗದಿಪಡಿಸುತ್ತದೆ. Sectional cut-offs, Overall cut-offs, ನಿಗದಿಪಡಿಸಲಾಗಿದ್ದು, ಪ್ರತಿ ತಪ್ಪು ಉತ್ತರಕ್ಕೆ ಆಯಾ ವಿಬಾಗಕ್ಕೆ ನಿಗದಿಪದಿಸಿದ ಆಂಕಗಳಿಂದ 0.25 ಅಂಕಗಳ ಕಡಿತವಿದೆ (ಋಣಾತ್ಮಕ ಅಂಕ).
ಮುಖ್ಯ(Mains) ಪರೀಕ್ಷೆಯಲ್ಲಿ 200 ಪ್ರಶ್ನೆಗಳಿದ್ದು ಗರಿಷ್ಟ 200 ಅಂಕಗಳಿಗೆ ನಡೆಯಲಿದ್ದು ಪರೀಕ್ಷಾ ಅವಧಿ ಎರಡು ಘಂಟೆಗಳ ದಾಗಿರುತ್ತದೆ.
ಇದರಲ್ಲಿ ಐದು ವಿಭಾಗಗಳಿದ್ದು ರೀಸನಿಂಗ್ 40 ಪ್ರಶ್ನೆ 50 ಅಂಕ ಕಂಪ್ಯೂಟರ್ ನಾಲೆಡ್ಜ್ 40 ಪ್ರಶ್ನೆ 20 ಅಂಕ, ಜನರಲ್ ಅವರ್ನೆಸ್ 40 ಪ್ರಶ್ನೆ 40 ಅಂಕ, ಇಂಗ್ಲಿಷ್ ಅಥವಾ ಹಿಂದಿ. ಯಾವುದಾದರೊಂದು ಪ್ರಶ್ನೆ ಪತ್ರಿಕೆ 40 ಪ್ರಶ್ನೆ, 40 ಅಂಕ. Numerical ಎಬಿಲಿಟಿ / Quantitative ಅಪ್ಟಿಟ್ಯೂಡ್ 40 ಪ್ರಶ್ನೆ 50 ಅಂಕಗಳನ್ನ ನಿಗದಿಪಡಿಸಲಾಗಿದೆ ಮೂರನೆಯ ಹಂತ ಅಧಿಕಾರಗಳ ಹುದ್ದೆಗಳಿಗೆ ಸಂದರ್ಶನವಿದ್ದು 100 ಅಂಕಗಳಿಗೆ ನಿಗದಿಯಾಗಿದ್ದು ಮುಖ್ಯ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕದ 80% ಹಾಗೂ ಸಂದರ್ಶನದಲ್ಲಿ ನೂರು ಅಂಕಗಳ 20% (80:20) ನಿಯಮದಂತೆ ರಾಂಕ್ ಪಟ್ಟಿ ತಯಾರಿಸುತ್ತಾರೆ.

RELATED ARTICLES  ಉತ್ತರಕನ್ನಡದಲ್ಲಿ ರೆಡ್ ಅಲರ್ಟ : ಪ್ರಮುಖ ಮಾಹಿತಿಗಳು ಇಲ್ಲಿದೆ.

ಪರೀಕ್ಷೆಯಲ್ಲಿ ನೀವು ಯಶಸ್ವಿಯಾಗಬೇಕಾದರೆ ಎಲ್ಲವನ್ನೂ ಉತ್ತರಿಸುವ ಗೋಜಿಗೆ ಹೋಗದೆ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ಮಾತ್ರ ಗುರುತಿಸಿದರೆ ಸಾಕು, ಅತ್ಯಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ನಿಖರವಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾದದು ಅಗತ್ಯ.

ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳಿ
ಪರೀಕ್ಷೆ ಹೇಗಿರುತ್ತದೆ, ಸಿಲಬಸ್ ಏನೆಂದು ಗೊತ್ತಾದ ಮೇಲೆ ನೀವೆ ಇವುಗಳಲ್ಲಿ ಯಾವ ವಿಷಯ ನಿಮಗೆ ಸುಲಭ ಹಾಗೂ ಕಠಿಣ ಎಂಬುದನ್ನು ನಿರ್ಧರಿಸಿ, ಮುಖ್ಯವಾಗಿ ಗಣಿತದ ಪ್ರಶ್ನೆಗಳನ್ನು ನೀವು ಎಸ್.ಎಸ್.ಎಲ್.ಸಿ ಯ ವರೆಗೆ ಓದಿರುತ್ತಿರಿ, ಹೀಗಾಗಿ ನಿಮಗೆ ಯಾವುದು ಗೊತ್ತಿದೆ ಎಂದು ತಿಳಿಯುತ್ತದೆ. ಈ ರೀತಿಯ ಸ್ವಯಂ ವಿಶ್ಲೇಷಣೆ ನಿಮ್ಮ ಪರೀಕ್ಷೆಯ ಸಿದ್ಧತೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನೂ ಮರೆಯದಿರಿ.
ಯಾವುದೇ ಕಾರಣಕ್ಕೂಕಾಲಹರಣ ಮಾಡದೆ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ, ಕಾಲಹರಣ ಮಾಡಿದಷ್ಟೂ ನೀವು ಆಯ್ಕೆಯಾಗುವ ಸಾಧ್ಯತೆಯನ್ನು ಮುಂದೆ ತಳ್ಳಿದಂತಾಗುತ್ತದೆ. ಎಂಬುದನ್ನು ನೆನಪಿಡಿ.

ಮೊದಲಿಗೆ Basic concepts, ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಸಂಗ್ರಹಿಸಿ ಹಾಗೂ ವಿವರವಾಗಿ ಅಭ್ಯಸಿಸಿ. ಮೂಲ ಪರಿಕಲ್ಪನೆ ಸರಿಯಾಗಿ ಅರ್ಥೈಸಿಕೊಳ್ಳದಿದ್ದಲ್ಲಿ ಪರೀಕ್ಷೆಯಲ್ಲಿ ಅದರ ಮೇಲೆ ಕೊಟ್ಟ ಪ್ರಶ್ನೆಗಳನ್ನು ಬಿಡಿಸಲು ಸಾಧ್ಯವಿಲ್ಲ ಎಂಬುದನ್ನು ಮರೆಯಬೇಡಿ.

ಕೇವಲ ಸಿದ್ಧಾಂತ (Theory)ಗಳಿಗೆ ಮಾತ್ರ ಜೋತು ಬೀಳದೆ ಮೂಲ ಸಿದ್ಧಾಂತಗಳಿಗೆ ಒತ್ತು ನೀಡಿ ಹಾಗೂ ಅದರ ಮೇಲೆ ಕೇಳಿರುವ ಹಳೆ ಪ್ರಶ್ನೆಗಳನ್ನು ಬಿಡಿಸಲು ಪ್ರಯತ್ನಿಸಿ Topics ಮೇಲೆ ಪ್ರಶ್ನೆಗಳನ್ನು ಬಿಡಿಸಲು ಪ್ರಯತ್ನಿಸಿ,

ಯಾವುದೇ ಕಾರಣಕ್ಕೂ ನೇರವಾಗಿ Mock Test ಗೆ ಪ್ರಯತ್ನಿಸಬೇಡಿ. ಕಾರಣ ಅಂಕ ಗಳಿಸಲಾಗದಿದ್ದಲ್ಲಿ ನಿಮ್ಮ ಮನೋಸ್ಥೈರ್ಯ ಕುಗ್ಗಿ ಹೋಗಬಹುದು. ಪ್ರತಿ ವಿಷಯಗಳಿಗೆ ಅಧ್ಯಾಯವಾರು ಪ್ರಶ್ನೆಗಳನ್ನು ಉತ್ತರಿಸಿದಾಗ ವಿಷಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.

ಕನಿಷ್ಟ ಪ್ರತಿ ವಿಷಯಗಳ ಶೇ 50 ರಷ್ಟಾದರೂ ಹಿಡಿತ ಸಾಧಿಸಿದ ನಂತರವೇ IBPS Site/ಇತರೆ ಸೈಟ್‌ ನಲ್ಲಿರುವ ಅಣಕು ಪರೀಕ್ಷೆ ಗೆ ಪ್ರಯತ್ನಿಸಿ.

ಪರೀಕ್ಷೆ ಮುಗಿಯುವವರೆಗೆ ದಿನದ ಕನಿಷ್ಠ 4 ರಿಂದ 6 ಗಂಟೆಗಳಷ್ಟಾದರೂ ಮೀಸಲಿಡಿ.ಅದು ಪ್ರಿಲಿಮ್ಸ್ ಹಾಗೂ ಮುಖ್ಯ ಪರೀಕ್ಷೆಗಳಿಗೆ.

ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದರಿಂದ ಮೊದಲ ದಿನದ ಮೊದಲ ತಂಡದ ಪರೀಕ್ಷೆಯ ಕುರಿತು ಅಂತರ್ಜಾಲದಲ್ಲಿ Education website ಗಳು ಪ್ರಕಟಿಸುವ ವಿಶ್ಲೇಷಣೆಗಳು ನಿಮಗೆ ದಿಕ್ಕೂಚಿ ಯಾಗಬಲ್ಲದು. ಮುಖ್ಯವಾಗಿ ಪ್ರಶ್ನೆ ಪತ್ರಿಕೆ ಸ್ವರೂಪ ಕೇಳಿರುವ ವಿಷಯ ಹಾಗೂ ಪ್ರಶ್ನೆಗಳನ್ನು ಬಿಡಿಸುವ ಸಾಮರ್ಥ್ಯ ಮಧ್ಯಮ, ಕಠಿಣ ಅಥವಾ ಸುಲಭ ಎಂಬುದು ತಿಳಿಯುತ್ತದೆ.

ಯಾವುದೇ ಕಾರಣಕ್ಕೂ ಕೊಟ್ಟಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲೆಬೇಕೆಂಬ ಹಠಕ್ಕೆ ಜೋತು ಬೀಳಬೇಡಿ. ಕಾರಣ ಋಣಾತ್ಮಕ ಮೌಲ್ಯಮಾಪನವಿದೆ. ಹಾಗೂ ಪ್ರತಿ ವಿಷಯದಲ್ಲೂ ಕನಿಷ್ಠ ಅಂಕ ತೆಗೆದುಕೊಳ್ಳಲೆಬೇಕೆಂಬ ಎಂಬ ನಿಯಮವೂ ಇದೆ.

ಅರ್ಹತಾ ಪರೀಕ್ಷೆಯಲ್ಲಿ 60-70 ರಷ್ಟಾದರೂ ಅಂಕ ಗಳಿಸಲು ಪ್ರಯತ್ನಿಸಿ, ಹಾಗೂ ಮುಖ್ಯ ಪರೀಕ್ಷೆಯಲ್ಲಿ ಹಿಂದಿನ ವರ್ಷದ Cut-off, ಅಂಕಗಳು ಸಾಮಾನ್ಯ ವರ್ಗದ್ದು 95 ರಿಂದ 113, ಅಂಕಗಳಾಗಿದ್ದು, ಒಬಿಸಿ/ಎಸ್‌ಸಿ/ಎಸ್‌ಟಿ ವರ್ಗದವಿರಗೆ 79 ರಿಂದ 102 ಅಂಕಗಳಾಗಿದೆ. ಈ ಸಲ ಕುಳಿತು ಕೊಳ್ಳುವ ಒಟ್ಟು ಅಭ್ಯರ್ಥಿಗಳ ಮೇಲೆ ಅಂಕಗಳು ನಿರ್ಧಾರವಾಗೋದರಿಂದ ಇದು ಬದಲಾಗುವ ಎಲ್ಲಾ ಸಾಧ್ಯತೆಗಳಿವೆ. ಹಾಗೂ ಇದು ಕೇವಲ ದಿಕ್ಕೂಚಿ ಅಷ್ಟೆ.

ಸಮಯದ ಮಿತಿಯಲ್ಲಿ ಒಮ್ಮೆ ಪ್ರಶ್ನೆಗಳನ್ನು ಅವಲೋಕಿಸಲು ಸಾಧ್ಯವಾದರೆ ಪ್ರಯತ್ನಿಸಿ, ಹಾಗೂ ಒಂದೇ ಪ್ರಶ್ನೆಗೆ ಹಲವಾರು ಉಪಪ್ರಶ್ನೆ ಗಳಿರುವುದನ್ನು ಮೊದಲು ಪ್ರಯತ್ನಿಸಿ. ಕಾರಣ ಸಮಯ ಬಿಡಿಸಲು ಸ್ವಲ್ಪ ಹೆಚ್ಚಾದರೂ ಉಪ ಪ್ರಶ್ನೆಗಳ ಸಮಯ ಹೊಂದಿಸಿಕೊಳ್ಳಬಹುದು.

ಪರೀಕ್ಷೆಯ ಸಿಲಬಸ್ ಏನಿರಬಹುದು?
ರೀಸನಿಂಗ್‌ನ ಸಿಲಬಸ್‌ (ಪ್ರಿಲಿಮ್ಸ್-ಮೇನ್ಸ್):
Seating Arrangement, Logical Reasoning, Tabulation, Puzzle, Coded Inequalities, Coding Decoding, Blood Relations, Syllogism, Input Output, Alphanumeric Series, Ranking/Direction/Alphabet Test, Data Sufficiency.

ನ್ಯೂಮರಿಕಲ್ ಎಬಿಲಿಟಿ/ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ (ಪ್ರೀಲಿಮ್ಸ್-ಮೇನ್ಸ್):
Data Interpretation; Permutation, Combination & Probability, Sequence & Series, Simplification, Number Systems, Ratio & Proportion, Percentage & Averages, Profit & Loss, Work & Time, Time & Distance, Mixtures & Allegations, Simple Interest & Compound Interest & Surds & Indices, Sequence & Series.
Indices, Seque

General Awareness (ಮೇನ್ಸ್ ): Current Affairs of Last 6 Months, Banking Awareness:
-Indian Financial System, History of Indian Banking Industry, Structure of Indian Banking, Regulatory Bodies like – RBI, SEBI, IRDA, PERDA, FSDC, FMC, etc. (RBI History / Functions / Roles), Indian Economy Questions, Budget Basics and Current Union Budget, International Organizations/ Financial Institutions, Indian Constitution, IBPS RRB General Awareness Books, Government Schemes Bharat Nirman, Swavlamban, Swabhiman, Aatmanirbar, etc., Other important concepts like – BASEL, Micro Finance, Base Rate, Negotiable Instruments, Credit Rating Agencies, Financial Inclusions, Teaser Rates, GAAR, Priority Sector Lending and all other relevant concepts.

ಇಂಗ್ಲೀಷ್(ಮೇನ್ಸ್):
Reading Comprehension, vocabulary, Cloze Test, Paragraph Complete/ Sentence Rearrangement, Para jumbles, Miscellaneous, Fill in the blanks, Multiple Meaning / Error Spotting.

ಕಂಪ್ಯೂಟರ್ ನಾಲೆಡ್ಜ್ (ಮೇನ್ಸ್):
The Internet (Concept, History, working environment, Application), History of Computers, Hardware, Software, Database Management System (DBMS), Communication (Basic Introduction). Operating System, Security Tools, Virus, Hacker, Number System, Security Tools, Virus, Hacker, MS Windows & MS Office, Networking (LAN, WAN).

ಗಮನಿಸಿ: ಈ ಹಿಂದಿನ ಪರೀಕ್ಷೆ ಯಲ್ಲಿ ಕೇಳಿರೋದರ ಆಧಾರದ ಮೇಲೆ ಇದನ್ನು ನೀಡಲಾಗಿದೆ.ಪ್ರತಿವರ್ಷವೂ ಸಿಲೇಬಸ್ ಬದಲಾಗುವುದರಿಂದ ಆಗಾಗ ವೆಬ್ ಸೈಟ್ ನ್ನು ಗಮನಿಸುತ್ತಿರಿ ಮತ್ತು ಹೆಚ್ಚಿನ ಮಾಹಿತಿಗಾಗಿ ಐಬಿಪಿಎಸ್ನ ಅಧೀಕೃತ ವೆಬ್ ಸೈಟ್ ನ್ನ ಸಂಪರ್ಕಿಸಿ.

ಆರ್ ಕೆ ಬಾಲಚಂದ್ರ.